Leelavathi Baipaditthaya | VIHARA PLUS | ಲೀಲಾವತಿ ಬೈಪಾಡಿತ್ತಾಯ
ฝัง
- เผยแพร่เมื่อ 11 ม.ค. 2025
- #ViharaPlus #LeelavathiBaipadithaya #Yakshagana
ಪ್ರಸ್ತುತ ಹಲವು ಮಹಿಳಾ ಕಲಾವಿದೆಯರು, ಭಾಗವತರು ಯಕ್ಷಗಾನದ ರಂಗದಲ್ಲಿ ತೊಡಗಿಸಿಕೊಂಡವರಿದ್ದಾರೆ, ಆದರೆ ಇಂದಿಗೆ ನಲವತ್ತು ವರ್ಷಗಳ ಮೊದಲು ಇಂಥದ್ದು ಕಲ್ಪಿಸುವದು ಸಾಧ್ಯವಿರಲಿಲ್ಲ.
ಆ ಹೊತ್ತಿಗೆ ಯಕ್ಷಗಾನ ಲೋಕ ಪ್ರವೇಶಿಸಿ ಪತಿಯ ಪ್ರೋತ್ಸಾಹದೊಂದಿಗೆ ಹಾಗೂ ಅವರ ಜೊತೆಯಲ್ಲೇ ರಂಗಸ್ಥಳದಲ್ಲಿ ತಮ್ಮದೇ ಸ್ಥಾನವನ್ನು ಗಟ್ಟಿ ಮಾಡಿಕೊಂಡವರು ಲೀಲಾವತಿ ಬೈಪಾಡಿತ್ತಾಯ.
ಪಾರ್ತಿಸುಬ್ಬನ ಊರಾದ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಹುಟ್ಟಿಬೆಳೆದವರು ಲೀಲಾವತಿ ಬೈಪಾಡಿತ್ತಾಯ. ಅಲ್ಲಿದ್ದಾಗ ಹುಡುಗಿಯರು ಯಕ್ಷಗಾನಕ್ಕ ಹೋಗುವ ಯಾವುದೇ ಅವಕಾಶ ಇರಲಿಲ್ಲ. ಆದರೆ ಶಾಸ್ತ್ರೀಯ ಸಂಗೀತವನ್ನು ಮಧೂರು ಪದ್ಮನಾಭ ಸರಳಾಯರಿಂದ ಕಲಿತರು. ಬಡತನದಿಂದಾಗಿ ಶಾಲೆಗೆ ಹೋಗಲಾಗಲಿಲ್ಲ, ಆದರೆ ಅಣ್ಣನಿಂದ ಹಾಗೂ ಇತರರಿಂದ ಅಕ್ಷರಾಭ್ಯಾಸ ಕಲಿತುಕೊಂಡರು. ಆ ಬಳಿಕ ಹಿಂದಿ ವಿಶಾರದ ಕೂಡಾ ಮಾಡಿದ್ದಾರೆ.
೧೯೭೫ರ ಬಳಿಕ ಅವರಿಗೆ ಯಕ್ಷಗಾನ ಸ್ಪರ್ಶ. ತೆಂಕಿನ ಖ್ಯಾತ ಹಿಮ್ಮೇಳದವರಾದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ವಿವಾಹವಾದರು. ಅವರ ಊರು ಕಡಬ. ಅದು ಯಕ್ಷಗಾನದ ಪರಿಸರ. ಅಲ್ಲಲ್ಲಿ ತಾಳಮದ್ದಳೆ ಯಕ್ಷಗಾನ ಇರುತ್ತಿತ್ತು. ಆದರೆ ಸಂಗೀತ ಜ್ಞಾನವಿದ್ದ ಲೀಲಾವತಿ ಬೈಪಾಡಿತ್ತಾಯರಿಗೆ ಮೆಲ್ಲನೆ ಯಕ್ಷಗಾನ ಭಾಗವತಿಕೆಯ ಪರಿಚಯ ಆಯ್ತು, ಅದನ್ನು ಹರಿನಾರಾಯಣರೂ ಪೋಷಿಸಿದರು. ಹಾಗೆ ಮೆಲ್ಲನೆ ಯಕ್ಷಪ್ರಪಂಚಕ್ಕೆ ಅಡಿಯಿಟ್ಟ ಅವರು ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಹಿರಿಮೆಗೆ ಪಾತ್ರರಾದರು. ತಮ್ಮ ಪತಿಯೊಂದಿಗೆ ಸುಬ್ರಹ್ಮಣ್ಯ, ಪುತ್ತೂರು, ಕರ್ನಾಟಕ, ಅರುವ, ಬಪ್ಪನಾಡು ಮೇಳ, ತಲಕಳ ಮುಂತಾದ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ, ೨೫ ವರ್ಷ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸಿದರು.
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡರು.
ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.
ಮೇಳದ ತಿರುಗಾಟವೆಂದರೆ ರಾತ್ರಿಯಿಡೀ ನಿದ್ದೆಗೆಟ್ಟು ಪಯಣಿಸುವುದು. ಕೆಲವೊಮ್ಮೆ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ್ದೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನ ಶ್ರೇಷ್ಟ ಭಾಗವತರಲ್ಲೊಬ್ಬರಾದ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಲೀಲಾ.
ಕಳೆದ ಒಂದು ದಶಕದಲ್ಲಿ, ಬಡಗು ತಿಟ್ಟಿನ ರಂಗದಲ್ಲಿಯೂ ಅವರು ಸುಶ್ರಾವ್ಯವಾಗಿ ಹಾಡಿ, ಬಡಗು ತಿಟ್ಟಿನ ಯಕ್ಷಗಾನ ಕಲಾ ಪ್ರೇಮಿಗಳು ಮತ್ತು ಕಲಾವಿದರ ಮನಸ್ಸನ್ನೂ ಗೆದ್ದಿದ್ದಾರೆ. ಮುಂಬಯಿ, ದೆಹಲಿಯಲ್ಲಿಯೂ ಲೀಲಾ ಅವರು ತಮ್ಮ ಕಂಠ ಸಿರಿಯನ್ನು ಕೇಳಿಸಿದ್ದಾರೆ.
ಸದ್ಯಕ್ಕೆ ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡುತ್ತಿದ್ದಾರೆ. ಇದಕ್ಕೆ ಮೊದಲು, ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
Gratitudes to Avinash Baipadithaya(+91 9986266991)
Library Video Courtesy: KRK Bhat Chitramoola & DiGi Yaksha Foundation
Video & Edit : VenuVinod(+91 9448386876)
/ viharaplus
ತುಂಬಾ ಚೆನ್ನಾಗಿದೆ...ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬಳಿಕ ತಿರುಗಾಟಕ್ಕೆ ಹೋಗುವುದೆಂದರೆ ನಿಜಕ್ಕೂ ಆಶ್ಚರ್ಯ...
ಅಬ್ಬಬ್ಬಾ ಕಂಠ ಕೇಳಿದ ಕೂಡಲೇ ಮೈ ರೋಮಾಂಚನವಾಯ್ತು 🙏
ಪ್ರಥಮ ಮಹಿಳಾ ಭಾಗವತೆ ಲೀಲಾವತಿ ಬೈಪಡಿತ್ತಾಯರ ಹಾಡುಗಾರಿಕೆ ಹಾಗೂ ಇವರ ಸಂದರ್ಶನ, ಪ್ರಸ್ತುತಿ ಚೆನ್ನಾಗಿದೆ.
ನಮೋನ್ನಮಃ🙏🙏🙏🙏🙏
Super
ಇಂದಿನ ಭಾಗವತರು ಅನುಸರಿಸಬೇಕು.
Amma namasthe nimma kanta Siri chennagide
ಎಂಥಾ ಕಂಠ ಅದ್ಭುತ ಅದಿನ್ನೆಂಥಾ ಹಿಡಿತ
Nice
👌👏🙏
🙏🙏🙏
🙏🥰
Super,👌💐
Very nice 👍
🌹🙏🌹
ನಮಸ್ತೆ ಲೀಲಕ್ಕ .... ಈ ಪೀಳಿಗೆ ಬಯಸುವ ಆನ್ಲೈನ್ ಕ್ಲಾಸ್ ಪ್ರಾರಂಭ ಮಾಡ್ತೀರಾ ?
ಲೀಲಾವತಿ ಮೇಡಂ ಅವರ ಕಂಠ ಸಿರಿಯ "ನೀರಾಟ ಗೊದಗುವ ಬಾರೆ ಪ್ರಿಯೆ" ಹಾಡು ಇದ್ದರೆ ಲಿಂಕ್ ಕಳುಹಿಸಿ 🙏🙏😑
🙏🙏🙏