ಚಿನ್ಮಯ ಸೇವಾ ಸಂಸ್ಥೆ ವತಿಯಿಂದ ಮನೆ ಮನಗಳ ಸಾಹಿತ್ಯ ಕಾರ್ಯಕ್ರಮ
ฝัง
- เผยแพร่เมื่อ 10 ก.พ. 2025
- ಚಂದಾಪುರ ಪುರಸಭೆ ಸದಸ್ಯೆ ಶ್ರೀಮತಿ ಜ್ಯೋತಿ ಜಗದೀಶಾಚಾರಿ ಮನೆಯಂಗಳದಲ್ಲಿ ನಡೆದ ಸಾಹಿತ್ಯ ಸಿಂಚನ ಕಾರ್ಯಕ್ರಮ
ಚಂದಾಪುರದ ಚಿನ್ಮಯ ಸೇವಾ ಸಂಸ್ಥೆಯ ವತಿಯಿಂದ ಪ್ರತಿ ತಿಂಗಳು ನಡೆಸುವ ಮನೆ ಮನಗಳಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಈ ಬಾರಿ ಚಂದಾಪುರ ಪುರಸಭೆ ವ್ಯಾಪ್ತಿಯ ಕೀರ್ತಿ ಬಡಾವಣೆಯಲ್ಲಿರುವ ಪುರಸಭಾ ಸದಸ್ಯರಾದ ಶ್ರೀಮತಿ ಜ್ಯೋತಿ ಜಗದೀಶಾಚಾರಿ ಮನೆಯಂಗಳದಲ್ಲಿ ಆಯೋಜಿಸಲಾಗಿತ್ತು. ಇನ್ನು ಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಚಂದಾಪುರ ಪುರಸಭೆಯ ಉಪಾಧ್ಯಕ್ಷೆ ಶ್ರೀಮತಿ ಮಂಜುಳಮ್ಮ ರವರು ಉದ್ಘಾಟಿಸಿದರು,
ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ|| ಚಿನ್ನ ಪ್ಪ ವೈ ಚಿಕ್ಕಹಾಗಡೆ ರವರು ವಹಿಸಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಕನ್ನಡದ ಕಬೀರ, ತತ್ವ ಪದಗಳ ಹರಿಕಾರ. ಸಂತ ಶಿಶುನಾಳ ಶರೀಪರ ಜೀವನ ಪರಿಚಯ ಹಾಗೂ ಅವರು ರಚಿಸಿದ ಗೀತೆಗಳ ಗಾಯನವನ್ನು ಚಂದಾಪುರದ ಗುರು ಪಂಚಾಕ್ಷರಿ ಪುಟ್ಟರಾಜು ಸಂಗೀತ ಶಾಲೆಯ ಶಿಕ್ಷಕರಾದ ಸಿದ್ದಲಿಂಗನ ಗೌಡ ರವರ ನೇತೃತ್ವದಲ್ಲಿ ಸಂಗೀತ ಶಾಲೆಯ ಮಕ್ಕಳಿಂದ ಗಾಯನ ಹಮ್ಮಿಕೊಳ್ಳಲಾಗಿತ್ತು.
ಇನ್ನು ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಿಆರ್ ವಿಜಯಕುಮಾರ್, ಪುರಸಭಾ ಸದಸ್ಯೆ ಶ್ರೀಮತಿ ಜ್ಯೋತಿ ಜಗದೀಶಾಚಾರಿ, ಶ್ರೀಮತಿ ಭಾರತಿ ಬಸವರಾಜು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಎಂ. ನಾಗವೇಣಿ, ಶಾರದಾ ಪಿಯು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ರೂಪಾ. ರಾಜ್ಯ ಪ್ರಶಸ್ಥಿ ಪುರಸ್ಕೃತ ಚಂದಾ ಪುರ ಮಹೇಶ್ ಮೊದಲಾದವರು ಭಾಗವಹಿಸಿದ್ದರು.
Super