ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಎಕ್ಸರೇ ಮಶಿನ್ ಕೊಡುಗೆ...

แชร์
ฝัง
  • เผยแพร่เมื่อ 11 ต.ค. 2024
  • ದಾಂಡೇಲಿಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನವರು ತಮ್ಮ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿಯಲ್ಲಿ ಜೋಯಿಡಾ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ 5 ಲಕ್ಷ ರೂಪಾಯಿಗಳ ವೆಚ್ಚದ ಡಿಜಿಟಲ್ ಎಕ್ಸರೇ ಮಷೀನನ್ನು ಕೊಡುಗೆಯಾಗಿ ನೀಡಿದ್ದಾರೆ.
    ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಹಾಗೂ ರಾಜೇಶ ತಿವಾರಿಯವರು ಗುರುವಾರ ಈ ಎಕ್ಸರೇ ಮಿಷನನ್ನ ಜೋಯಿಡಾ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ವಿನಯ್ ಕೊಚ್ಚರಗಿ ಅವರಿಗೆ ಹಸ್ತಾಂತರಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿಯವರು ಜೋಯಿಡಾ ಸರ್ಕಾರಿ ಆಸ್ಪತ್ರೆಯ ವೈದ್ಯಧಿಕಾರಿ ಡಾ. ವಿನಯ ಕೊಚ್ಚರಗಿಯವರ ಮನವಿಯಂತೆ ಜೋಯಿಡಾ ಸರ್ಕಾರಿ ಆಸ್ಪತ್ರೆಗೆ 5 ಲಕ್ಷ ರು. ವೆಚ್ಚದ ಡಿಜಿಟಲ್ ಎಕ್ಸರೇ ಮಶಿನನ್ನು ನಮ್ಮ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ನೀಡಲಾಗಿದೆ. ಇದು ಸಾರ್ವಜನಿಕರಿಗೆ ಸದ್ಬಳಕೆಯಾಗಬೇಕು ಎಂದರು.
    ಎಕ್ಸರೇ ಮಷೀನನ್ನು ಹಸ್ತಾಂತರಿಸಿಕೊಂಡು ಮಾತನಾಡಿದ ಜೋಯಿಡಾ ತಾಲೂಕು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿನಯ ಅವರು ನಮ್ಮ ಆಸ್ಪತ್ರೆಯಲ್ಲಿ ಎಕ್ಸರೇ ಮಷೀನ್ ಇರಲಿಲ್ಲ. ಇದು ಈ ಭಾಗದ ಜನರಿಗೆ ಒಂದಿಷ್ಟು ಸಮಸ್ಯೆ ಆಗುತ್ತಿತ್ತು. ಆ ಕಾರಣಕ್ಕಾಗಿ ನಾವು ಕಾಗದ ಕಂಪನಿಯವರಲ್ಲಿ ಮನವಿ ಮಾಡಿಕೊಂಡಿದ್ದೆವು. ಇದೀಗ ಅವರು ಡಿಜಿಟಲ್ ಎಕ್ಸರೇ ಮಶಿನ್ ನೀಡುವ ಮೂಲಕ ಸಹಕರಿಸಿದ್ದಾರೆ. ಇದು ಈ ಭಾಗದ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ಹೇಳಿ ಕಂಪನಿಯ ಸೇವಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಜೋಯಿಡಾ ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಕಾಗದ ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ความคิดเห็น •