ಮುಧೋಳದ ಪ್ರಾತಃಸ್ಮರಣೀಯ ರಾಜಕಾರಣಿ ಶ್ರೀ ಕೆಪಿ ನಾಡಗೌಡರ ಸವಿನೆನಪು...

แชร์
ฝัง
  • เผยแพร่เมื่อ 9 ก.พ. 2025
  • ರಾಜನೈತಿಕ ಅಖಾಡವೆ ಆಗಿರುವ ವಿಧಾನಸೌಧವನ್ನು ಮೊಟ್ಟಮೊದಲ ಬಾರಿಗೆ ಸಾಹಿತ್ಯ ಸೌಧವನ್ನಾಗಿ ಮಾಡಿ ಅಲ್ಲಿ ಮುಧೋಳದ ಮುಕುಟಮಣಿ ರನ್ನನ ಬಗ್ಗೆ ಅಂದು ಅವರು ನೀಡಿದ ಉಪನ್ಯಾಸಕ್ಕೆ ಆಗಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸರ ಅವರ ಬಾಯಿಂದ " ಗಂಡು ಭಾಷೆಯಲ್ಲಿನ ಆಹ್ಲಾದಕರ ರಸಸ್ವಾದದ ಅನುಭವವಾದದ್ದು ಇದೇ ಮೊದಲು" ಎಂಬ ಉದ್ಗಾರವನ್ನು ಹೊರಡಿಸಿದ ಕೀರ್ತಿ ಈ ಗಂಡು ಮೆಟ್ಟಿನ ನಾಡಿನ ಕುವರ ಆಧುನಿಕ ರನ್ನ ಶ್ರೀ ಕೆ ಪಿ ನಾಡ ಗೌಡರಿಗೆ ಸಲ್ಲುತ್ತದೆ...
    ಶ್ರೀಯುತರು 25 ಡಿಸೆಂಬರ್ 1916 ರಂದು ತಾಯಿ ಯಮುನಕ್ಕ ತಂದೆ ಪಾಂಡಪ್ಪ ಗೌಡರ ಉದರದಿಂದ ಸಾಮಾನ್ಯ ಕೃಷಿಕ ಕುಟುಂಬದಲ್ಲಿ ಗೋಕಾಕ್ ತಾಲೂಕಿನ "ಅವರಾದಿ" ಗ್ರಾಮದಲ್ಲಿ ಜನಿಸಿದರು.. ಹುಟ್ಟೂರಿನಷ್ಟೇ ಅವಿನಾಭಾವ ಸಂಬಂಧವನ್ನು ಮುಧೋಳ ತಾಲೂಕಿನ "ಚಿಂಚಖಂಡಿ ಕೆಡಿ" ಗ್ರಾಮದ ಜೊತೆ ಇಟ್ಟುಕೊಂಡಿದ್ದರು...
    ಬಾಲಕನಾಗಿದ್ದಾಗಿನಿಂದಲೂ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಗೌಡರು ಮುಂದೆ ಕಾನೂನು ಪದವಿಯನ್ನು ಮುಗಿಸಿ ಮುಧೋಳ ಮುನ್ಸಿಪಲ್ ಕೋರ್ಟಿನಲ್ಲಿ ವಕೀಲಕಿ ವೃತ್ತಿಯನ್ನು ಪ್ರಾರಂಭಿಸಿದರು.. ತಮ್ಮ ಸಾಮಾಜಿಕ ಕಳಕಳಿಯಿಂದ ತಾಲೂಕಿನಾದ್ಯಂತ "ಬಡವರಪರ ವಕೀಲ"
    ಎಂಬ ಖ್ಯಾತಿಯನ್ನು ಪಡೆದರು.. ಇದರ ಜೊತೆಗೆ ಆಳವಾಗಿ ಸಾಹಿತ್ಯ ಅಧ್ಯಯನ ನಡೆಸಿ ಹಾಗೂ ಕವಿ ರನ್ನನ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಮತ್ತು ತಮ್ಮ ಪ್ರಕಾರ ವಾಗ್ಮಿತನದಿಂದ ತಾಲೂಕಿನಾದ್ಯಂತ ಪಂಡಿತ ಪಾಮರರೆನ್ನದೇ ಎಲ್ಲರಿಗೂ ಚಿರಪರಿಚಿತರಾಗಿ ತಮ್ಮನ್ನು ತಾವೇ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು ಯಾವುದೇ ರೀತಿಯ ಸಂಪನ್ಮೂಲಗಳು ಇಲ್ಲದೆ ಇದ್ದರೂ ತಮ್ಮ ಕಾಂತೀಯ ವ್ಯಕ್ತಿತ್ವದಿಂದಾಗಿ ಛಲಬಿಡದ ಚಲದಂಕ ಮಲ್ಲನಂತೆ ಕ್ರಮವಾಗಿ 1967 ಹಾಗೂ 1972 ರಲ್ಲಿ ಹೀಗೆ ಎರಡು ಅವಧಿಗೆ ಮುಧೋಳ ತಾಲ್ಲೂಕಿನ ಮತ ಕ್ಷೇತ್ರದಲ್ಲಿ ಪ್ರಚಂಡ ವಿಜಯ ಸಾಧಿಸಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಕ್ರಾಂತಿಕಾರಿ ಈ ನಮ್ಮ ಶ್ರೀ ಕೆಪಿ ನಾಡಗೌಡರು..
    ಎರಡು ಬಾರಿ ಶಾಸಕರಾಗಿ ತಾಲೂಕಿನಾದ್ಯಂತ ಅನೇಕ ಜನಪರ ಕಾರ್ಯಗಳನ್ನು ಕೈಗೊಂಡು ಮುಧೋಳದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ, ಮುಖ್ಯವಾಗಿ ಆ ಕಾಲದಲ್ಲಿ ಬರದ ನಾಡು ಎಂದು ಕುಖ್ಯಾತಿ ಗೊಂಡಿದ್ದ ಈ ನಾಡಲ್ಲಿ ಪ್ರಪ್ರಥಮ ಬಾರಿಗೆ ನೀರಾವರಿಯ ಚಿಂತನೆಯ ಬೀಜವನ್ನು ಬಿತ್ತಿ ಅದನ್ನು ಕಾರ್ಯರೂಪಕ್ಕೆ ತಂದು ಅದು ಇಂದಿಗೆ ಹಂತ ಹಂತವಾಗಿ ಹೆಮ್ಮರವಾಗಿ ಬೆಳೆದು "ಸಕ್ಕರೆ ನಾಡು ಮುಧೋಳ" ಎಂಬ ಪ್ರಸಿದ್ಧಿಯನ್ನು ಪಡೆಯುವುದರ ಹಿಂದೆ ಹಠವಾದಿ ನಾಡಗೌಡರ ದೂರದೃಷ್ಟಿ ಇದೆ.. ಇಷ್ಟೆಲ್ಲ ಖ್ಯಾತಿ, ಅಧಿಕಾರ, ಜನಪ್ರಿಯತೆ ಇವರ ಕಾಲ್ಬಳಿ ಬಿದ್ದಿದ್ದರು ಅದನೆಂದು ತಲೆಗೇರಿಸಿಕೊಳ್ಳದೆೇ ಸರಳವಾಗಿ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬದುಕಿ ಬಾಳಿ ಹೋದ ಈ ಶ್ರೇಷ್ಠ ಸತ್ಪುರುಷರನ್ನು ಖ್ಯಾತ ಪತ್ರಕರ್ತರಾದ ಶ್ರೀ ಮಲ್ಲಿಕಾರ್ಜುನ್ ಹೆಗ್ಗಳಗಿ ತಾವು ಕಂಡ ಶ್ರೀ ಕೆಪಿ ನಾಡಗೌಡರು ಹೇಗಿದ್ದರೂ ಎಂಬುದನ್ನು ಹೇಳಿದ್ದಾರೆ.. ದಯವಿಟ್ಟು ಆಲಿಸಿ, ಎಲ್ಲರಿಗೂ ಸಹ ವಿಡಿಯೋವನ್ನು ಕಳಿಸಿಕೊಡಿ..
    #ನಿತ್ಯನೂತನ
    #nityanuthana
    #mudhol

ความคิดเห็น • 5