"Pavamana Pavamana Jagada Prana | Devotional Classic" | Cover By Girish Shriyan
ฝัง
- เผยแพร่เมื่อ 21 ธ.ค. 2024
- ಹರಿ ಸರ್ವೋತ್ತಮ ವಾಯು ಜೀವೋತ್ತಮ - ಇದು ಮಧ್ವ ಮತಾನುಯಾಯಿಗಳಿಗೆ ತರ್ಕ ಮಂತ್ರ. ಪ್ರಾಣದೇವರಿಗೆ ಸಮರ್ಪಿತ ಈ ಭಕ್ತಿ ಗೀತೆಯ ರಚನೆ ವಿಜಯದಾಸರದು.
ಪವಮಾನ ಪವಮಾನ ಜಗದಾ ಪ್ರಾಣಾ / #Pavamana Pavamana #Jagadaprana Lyrics
.
.
.
.
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|