BR Hills l BiligiriRangana Betta | Tiger Reserve Forest | K Gudi | Biligiri Ranganatha Temple |

แชร์
ฝัง
  • เผยแพร่เมื่อ 7 ก.ย. 2024
  • ಬಿಳಿಗಿರಿರಂಗನ ಬೆಟ್ಟಮೈಸೂರಿನಿಂದ ೧೨೦ ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 175. ಕಿ.ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ , ಸಮುದ್ರ ಮಟ್ಟದಿಂದ ೧೫೫೨ ಮೀಟರ್ ಎತ್ತರದಲ್ಲಿದೆ, ಚಾಮರಾಜನಗರ ಹಾಗೂ ಯಳಂದೂರು ಮಾರ್ಗವಾಗಿ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಶ್ರೀರಂಗನಾಥನ ನೆಲೆವೀಡು ಬಿಳಿಗಿರಿ ರಂಗನ ಬೆಟ್ಟ, ಪುರಾಣ ಪ್ರಸಿದ್ಧ ಸ್ಥಳ
    ಹೆಸರಿನ ಐತಿಹ್ಯ
    • ಈ ಕ್ಷೇತ್ರಕ್ಕೆ ಬಿಳಿಗಿರಿ ಎಂದು ಹೆಸರು ಬರಲು ಬೆಟ್ಟದಲ್ಲಿ ಬಿಳಿಯ ಬಣ್ಣದ ಶಿಲೆಗಳಿರುವುದೇ ಕಾರಣ. ಈ ಬೆಟ್ಟವನ್ನು ಜನಪದರು ಬಿಳಿಕಲ್ಲು ಬೆಟ್ಟ ಎಂದರೆ, ಪಂಡಿತರು ಶ್ವೇತಾದ್ರಿ ಎಂದೂ ಕರೆದಿದ್ದಾರೆ. ಬ್ರಹ್ಮಾಂಡ ಪುರಾಣದಲ್ಲಿ ಈ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಉಲ್ಲೇಖಿಸಲಾಗಿದೆ. ೫,೦೯೧ ಅಡಿ ಎತ್ತರದ ನಿಸರ್ಗರಮಣೀಯವಾದ ಬೆಟ್ಟದಲ್ಲಿ ನವರಂಗ, ಮುಖಮಂಟಪದಿಂದ ಕೂಡಿದ ಬಿಳಿಗಿರಿರಂಗನ ಪುರಾತನ ದ್ರಾವಿಡಶೈಲಿಯ ದೇವಾಲಯವಿದೆ.
    ಬಿಳಿಗಿರಿ ರಂಗಸ್ವಾಮಿ ದೇವಾಲಯ
    ರಂಗನಾಥ ದೇವಾಲಯದ ಒಂದು ಖಾಲಿ ಬಂಡೆಯ ಅಂಚಿನ ಮೇಲೆ ಅಭಯಾರಣ್ಯದ ಉತ್ತರದ ಭಾಗದ ತುದಿಯಲ್ಲಿ ನೆಲೆಗೊಂಡಿದೆ. ಬೆಟ್ಟವು ತನ್ನ ಹೆಸರನ್ನು (ಕನ್ನಡದಲ್ಲಿ ಬಿಳಿ ಬೆಟ್ಟ ಎಂದು ಅರ್ಥ) ನೀಡುವ, ಬಿಳಿ ಬಣ್ಣ ಕಾಣುತ್ತದೆ. ಇಲ್ಲಿನ ದೇವತೆಯನ್ನು ಸಾಮಾನ್ಯವಾಗಿ ಬಿಳಿಗಿರಿರಂಗ ಎಂದು ಕರೆಯಲಾಗುತ್ತದೆ ಮತ್ತು ಒಂದು ಅನನ್ಯವಾದ ನಿಂತ ಭಂಗಿಯಲ್ಲಿ ಚಿತ್ರಿಸಲಾಗಿದೆ. ಈ ದೇವಸ್ಥಾನದಲ್ಲಿ ರಂಗನಾಥ ದೇವರ ನಿಂತಿರುವ ರೂಪ, ಹಿಂದಿನ ವೆಂಕಟೇಶ ದೇವಸ್ಥಾನದ ಪುನರ್ಸ್ಥಾಪನೆ ಎಂದು ಹೇಳಲಾಗುತ್ತದೆ, ಟಿಪ್ಪು ಸುಲ್ತಾನ ಅವರು ಬೇಟೆಯಾಡುವ ಕಾರ್ಯಚರಣೆಯಲ್ಲಿ ಸಮಯದಲ್ಲಿ ಈ ಬೆಟ್ಟಗಳ ಭೇಟಿ ನೀಡಿದಾಗ ಇದನ್ನು ಪುನರುಜ್ಜೀವನ ಮಾಡಲಾಗಿದೆ ಎನ್ನಲಾಗಿದೆ. ಮತ್ತು ಅವರು ರಂಗನಾಥ ನ ಪೋಷಕರಾಗಿ ಸುಲ್ತಾನ್ ಪ್ರೋತ್ಸಾಹದಲ್ಲಿ ಆಕರ್ಷಿಸಲು ಸಂಭವಿಸಿರಬಹುದು ಎಂದು ಹೇಳಲಾಗಿದೆ. ದೇವಸ್ಥಾನದಲ್ಲಿರುವ ಇತರ ದೇವತೆಗಳಲ್ಲಿ ರಂಗನಾಯಕಿ ಮತ್ತು ಹಲವಾರು ಆಳ್ವಾರರು ಸೇರಿವೆ. ವಾರ್ಷಿಕ ತೇರು ಏಪ್ರಿಲ್ ತಿಂಗಳ ವೈಶಾಖದಲ್ಲಿ ನಡೆಯುತ್ತದೆ. ಪ್ರತಿ ಮೂರು ಅಥವಾ ಐದು ವರ್ಷಗಳಿಗೊಮ್ಮೆ, ೧-ಅಡಿ (೦.೩೦ ಮೀ) ಮತ್ತು ೯ ಇಂಚು, ಅಳತೆಯ ದೊಡ್ಡ ಚಪ್ಪಲಿ ಜೋಡಿಯನ್ನು ರಂಗನಾಥನಿಗೆ. ಬೂದಿತಿಟ್ಟು ಗ್ರಾಮದ ಮಾದಿಗ ಸಮುದಾಯದವರು. ಈ ಗ್ರಾಮದ ಪೂರ್ವಿಕರಾದ ದೊಡ್ಡಕುನ್ನಯ್ಯ.
    ಶಿವಲಂಕರಯ್ಯ .ಮಂಚಯ್ಯ.ಜವರನಿಂಗಯ್ಯ.ಇನ್ನಿತರ ಪೂರ್ವಿಕರು . ಶತಮಾನಗಳಿಂದಲೂ ಈ ರಂಗನಾಥನಿಗೆ ಪಾದುಕೆಗಳನ್ನು ಅರ್ಪಿಸಿಕೊಂಡು ಬರುತ್ತಿದ್ದಾರೆ.
    • ಇಲ್ಲಿ ೫ ಅಡಿ ಎತ್ತರ ಇರುವ ಮೂಲ ದೇವರನ್ನು ಬ್ರಹ್ಮರ್ಷಿಗಳಾದ ವಾಸಿಷ್ಠರೇ ಪ್ರತಿಷ್ಠಾಪಿಸಿದರು ಎಂದು ಸ್ಥಳಪುರಾಣ ಸಾರುತ್ತದೆ. ನವರಂಗದ ಬಲಭಾಗದಲ್ಲಿರುವ ಮೂರು ಗೂಡುಗಳಲ್ಲಿ ಲೋಹದಿಂದ ನಿರ್ಮಿಸಿದ ರಂಗನಾಥ, ಹನುಮಂತ ಮಣವಾಳ ಮಹಾಮುನಿಯ ಮೂರ್ತಿಗಳಿವೆ. ಪಕ್ಕದಲ್ಲೇ ಅಲಮೇಲು ಮಂಗಮ್ಮ, ದೇವಿ ಸನ್ನಿಧಿ ಇದೆ. ನವರಂಗದ ಎಡಭಾಗದಲ್ಲಿರುವ ಗೂಡುಗಳಲ್ಲಿ ರಾಮಾನುಜಾಚಾರ್ಯ, ನಮ್ಮಾಳ್ವಾರ್ ಮೂರ್ತಿಗಳಿವೆ.
    • ವೇದಾಂತಾಚಾರ್ಯರ ಮೂರ್ತಿಯನ್ನೂ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪಿತೃವಾಕ್ಯ ಪರಿಪಾಲನೆಗಾಗಿ ತಾಯಿ ರೇಣುಕಾಮಾತೆಯ ಶಿರವನ್ನು ತನ್ನ ಪರಶುವಿನಿಂದ ಚಂಡಾಡಿದ ಪರಶುರಾಮ ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಗಿರಿಯಲ್ಲಿ ತಪವನ್ನಾಚರಿಸಿ ವಿರಜಾ ನದಿಯ ಜಲದಿಂದ ಭಗವಂತನ ಪಾದತೊಳೆದನೆಂದೂ ಸ್ಥಳಪುರಾಣ ಹೇಳುತ್ತದೆ.
    • ಹೀಗಾಗೇ ದೇವಾಲಯದಿಂದ ೧೬ ಕಿ.ಮೀ. ದೂರದಲ್ಲಿರುವ ವಿರಜಾ ನದಿಗೆ, ಭಾರ್ಗವಿ ನದಿ ಎಂದು ಹೆಸರು ಬಂದಿದೆ. ಬೆಟ್ಟದ ಮೇಲೆ ಗಂಗಾಧರೇಶ್ವರನ ದೇಗುಲವೂ ಇದೆ. ಅಸುರರನ್ನು ತನ್ನ ಕೆಂಗಣ್ಣಿನಿಂದ ಭಸ್ಮಮಾಡಿದ ಶಿವ ಇಲ್ಲಿ ಗಂಗಾಧರನಾಗಿ ನೆಲೆ ನಿಂತ ಎನ್ನುತ್ತದೆ ಐತಿಹ್ಯ. ಶಿವ ಹಾಗೂ ನಾರಾಯಣರು ನೆಲೆಸಿಹ ಈ ತಾಣ ಹರಿಹರ ಕ್ಷೇತ್ರವೆಂದೂ ಪ್ರಖ್ಯಾತವಾಗಿದೆ.
    ಆಹ್ಲಾದಕರ ತಾಣ
    ಬಿಳಿಗಿರಿರಂಗನಬೆಟ್ಟವನ್ನು ಪ್ರವೇಶಿಸುತ್ತಿದ್ದಂತೆಯೇ ಮೇಲಿಂದ ಮೇಲೆ ಬೀಸಿ ಬರುವ ತಂಗಾಳಿಯಿಂದಾಗಿ ನಡುಬೇಸಿಗೆಯೂ ಕೂಡ ಬೆಳದಿಂಗಳೆನೋ ಎಂಬಂತೆ ಭಾಸವಾಗುತ್ತದೆ. ಕಣ್ಣು ಹಾಯಿಸಿದುದ್ದಕ್ಕೂ ಕಾಣಸಿಗುವ ಪ್ರಕೃತಿಯ ವಿಹಂಗಮ ನೋಟ ನಮ್ಮೆಲ್ಲಾ ಜಂಜಾಟಗಳನ್ನು ಮರೆಸಿ ಉಲ್ಲಾಸ ತುಂಬುತ್ತದೆ. ಕಾಡಿನಂಚಿನ ಸೋಲಿಗರ ಜೋಪಡಿಗಳು... ಅದರಾಚೆಗಿನ ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳನ್ನು ಹೊತ್ತು ಸಾಗುವ ಸೋಲಿಗರು... ಅರಣ್ಯದ ನಡುವಿನಿಂದ ಛಂಗನೆ ನೆಗೆದು ಓಡುವ ಜಿಂಕೆಗಳು... ಘೀಳಿಡುವ ಆನೆಗಳು... ಹೀಗೆ ಒಂದು, ಎರಡಲ್ಲ ಹತ್ತಾರು ವಿಸ್ಮಯ ನೋಟಗಳು ಕಣ್ಮುಂದೆ ಹಾದು ಹೋಗುತ್ತವೆ.
    ಪ್ರವಾಸಿ ತಾಣ
    • ಬಿಳಿಗಿರಿರಂಗನ ಬೆಟ್ಟ ಸುಂದರ ಪ್ರವಾಸಿ ತಾಣವೂ ಹೌದು. ಇದು ವನ್ಯಮೃಗಗಳ ಬೀಡು, ಶ್ರೀರಂಗನಾಥನ ನೆಲೆವೀಡು ಬಿಳಿಗಿರಿರಂಗನಬೆಟ್ಟವನ್ನು ಶ್ವೇತಾದ್ರಿ ಬಿಳಿಕಲ್ಲು ಬೆಟ್ಟ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಇದೊಂದು ವನ್ಯಧಾಮವಾಗಿದ್ದು, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿ ಎಂದರೆ ತಪ್ಪಾಗುವುದಿಲ್ಲ. ಏಷ್ಯಾದ ಆನೆಗಳು, ಬಿಳಿಪಟ್ಟೆಗಳ ಹುಲಿಗಳ ವಾಸಕ್ಕೆ ಯೋಗ್ಯವಾಗಿರುವ ಈ ತಾಣದಲ್ಲಿ ಸುಮಾರು ೭೦೦ ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯ ಪ್ರಭೇದಗಳಿವೆ.
    • ಇಷ್ಟು ಮಾತ್ರವಲ್ಲದೆ ಚಿರತೆ, ಜಿಂಕೆ, ಸೀಳುನಾಯಿ ಮುಂತಾದ ಪ್ರಾಣಿಗಳು ೨೦೦ ಕ್ಕೂ ಅಧಿಕ ಪಕ್ಷಿ ಸಂಕುಲಗಳು ಇಲ್ಲಿವೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯವಿದ್ದು, ಈ ದೇವಾಲಯವು ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣಗೊಂಡಿದ್ದಾಗಿದ್ದು, ದ್ರಾವಿಡ ಶೈಲಿಯಲ್ಲಿದೆ.
    • ಇಲ್ಲಿನ ಆಧಿದೇವತೆ ಶ್ರೀ ಬಿಳಿಗಿರಿರಂಗನಾಥ ಹಾಗೂ ಶ್ರೀರಂಗಪಟ್ಟಣದ ರಂಗನಾಥ, ಶಿವನಸಮುದ್ರದ ಹಾಗೂ ತಿರುಚನಾಪಳ್ಳಿಯ ಶ್ರೀರಂಗ, ವೆಂಕಟೇಶ ಅಣ್ಣತಮ್ಮಂದಿರು ಎಂಬ ನಂಬಿಕೆ ಇಲ್ಲಿನವರದ್ದಾಗಿದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆಯಾದರೂ ಯುಗಾದಿ ಕಳೆದ ನಂತರ ನಡೆಯುವ ಜಾತ್ರೆ ಪ್ರಸಿದ್ಧಿ ಪಡೆದಿದೆ.
    • ಈ ಸಂದರ್ಭ ನಡೆಯುವ ಬ್ರಹ್ಮರಥೋತ್ಸವವನ್ನು ನೋಡಲು ಸಹಸ್ರಾರು ಮಂದಿ ನೆರೆಯುತ್ತಾರೆ. ಈ ಸಂದರ್ಭ ಸ್ವಾಮಿಗೆ ಪಾದುಕೆ ಅರ್ಪಿಸಲಾಗುತ್ತದೆಯಲ್ಲದೆ, ಈ ಪಾದುಕೆಯಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬುವುದು ಪ್ರತೀತಿ. ೧೬ ಕಿ.ಮೀ.ನಷ್ಟು ಉದ್ದದವರೆಗೆ ಹಬ್ಬಿರುವ ಬಿಳಿಗಿರಿರಂಗನ ಬೆಟ್ಟ ಶ್ರೇಣಿಯ ನೋಟವೇ ಸುಂದರ.
    ಬಹುಪಯೋಗಿಯಾಗಿ
    • ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ಅಲ್ಲಿಗೂ ಹೋಗಬಹುದಾಗಿದೆ.
    ಇತಿಹಾಸ
    • ಈ ಊರಿನಿಂದ ೧೯ ಕಿ.ಮೀ. ದೂರದಲ್ಲಿ ಶಿವನಸಮುದ್ರದ ಗಂಗರಾಜ ಕಂಚು ಕೋಟೆ ನಿರ್ಮಿಸಿದ್ದನೆನ್ನುತ್ತದೆ ಇತಿಹಾಸ. ಈಗಲೂ ಕೋಟೆಯ ಅವಶೇಷಗಳು ಇದಕ್ಕೆ ಮೂಕಸಾಕ್ಷಿಯಾಗಿ ನಿಂತಿವೆ. ಇಲ್ಲಿನ ಬಿಳಿಕಲ್ಲು ತಿರು ವೆಂಕಟನಾಥನಿಗೆ ಹದಿನಾಡಿನ ಮುದ್ದರಾಜ ೧೬೬೭ ರಲ್ಲಿ ದತ್ತಿ ಬಿಟ್ಟನೆಂದು ತಾಮ್ರಶಾಸನ ಸಾರುತ್ತದೆ. ದಿವಾನ್ ಪೂರ್ಣಯ್ಯನವರು ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನೇ ದತ್ತಿಯಾಗಿ ಕೊಟ್ಟಿದ್ದರು.
    ಹವಾಮಾನ
    ಬೆಂಗಳೂರು, ಮೈಸೂರು, ಚಾಮರಾಜನಗರ, ಯಳಂದೂರಿನಿಂದ ನೇರ ಬಸ್ ಸೌಲಭ್ಯ ಇದೆ. ಪ್ರವಾಸಿ ಮಂದಿರ, ಗುಡಿ ಕ್ಯಾಂಪ್ನಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಈ ಬೆಟ್ಟದಲ್ಲಿ ಕಾಡಾನೆ, ಕರಡಿಗಳ ಕಾಟವಿದೆ ರಾತ್ರಿಯ ಪ್ರಯಾಣ ಮಾಡದಿರುವುದು ಉತ್ತಮ.

ความคิดเห็น • 3