Time to support our Aspiring Maratha politicians in the Political Arena | @cdchavan

แชร์
ฝัง
  • เผยแพร่เมื่อ 8 ม.ค. 2024
  • Namaskar, My name is CD Chavan
    I want to raise my voice for our community of people who live in Karnataka state and India. In about 10 Lok Sabha constituencies and 30 assembly constituencies in the state of Karnataka, the voters of the Maratha community are decisive. It is known to all that our community has become degraded and weakened in politics making the people of our community a vote bank.
    Our community across the country is willing to support Shri V.S Shyam Sundar Gaikwad Ji who is an aspiring political leader from Uttara Kannada Jilla in the upcoming Lok Sabha elections and provide social justice, appropriate political status, and political representation.
    With regards
    CLICK THIS LINK AND PRESS SEND BUTTON TO SUPPORT MARATHA COMMUNITY tinyurl.com/3mk9ms2x
    ಮಾನ್ಯರೆ,
    ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಸುಮಾರು 10 ಲೋಕಸಭಾ ಕ್ಷೇತ್ರ, 30 ವಿಧಾನಸಭಾ ಕ್ಷೇತ್ರಗಳಲ್ಲಿ ಮಾರಾಠ ಸಮುದಾಯದ ಮತದಾರರು ನಿರ್ಣಾಯಕ ರಾಗಿದ್ದಾರೆ. ಕಾಲ-ಕಾಲಾಂತರಗಳಿಂದ ನಮ್ಮ ಸಮುದಾಯದ ಮತದಾರರು ಭಾರತೀಯ ಜನತಾ ಪಕ್ಷದೊಂದಿಗೆ ಸ್ವಇಚ್ಛೆಯಿಂದ ಭಾವನಾತ್ಮಕ ಸಂಬಂಧವನ್ನು ಹೊಂದಿ ದೇಶ ಮತ್ತು ಹಿಂದುತ್ವದ ಸಲುವಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡಿದ್ದಾರೆ. ಭಾಜಪ ಪಕ್ಷದ ಪ್ರಮುಖ ಅಜೇಂಡವಾದ ಹಿಂದುತ್ವಕ್ಕೆ ನಮ್ಮ ಸಮುದಾಯದ ಜನರು ಕಟಿಬದ್ಧರಾಗಿರುವುದನ್ನು ತಾವೆಲ್ಲರೂ ಮನಗಂಡಿದ್ದಿರಿ. ಹಿಂದುತ್ವದ ವಿಚಾರಕ್ಕೆ ಬದ್ಧರಾದ ನಮ್ಮ ಸಮುದಾಯವು ಯಾವುದೇ ಆಸೆ ಆಕಾಂಕ್ಷಿಗಳಿಗೆ ಒಳಗಾಗದೆ ನಿರಂತರವಾಗಿ ತನು ಮನದಿಂದ ಬಿಜೆಪಿ ಪಕ್ಷವನ್ನೇ ತಮ್ಮ ಕುಟುಂಬ ಎಂದು ಭಾವಿಸಿ ತ್ಯಾಗ ಬಲಿದಾನ ಮಾಡಿದ್ದಾರೆ. ಆದರೂ ಸಹ ನಮ್ಮ ಸಮುದಾಯ ರಾಜಕೀಯದಲ್ಲಿ ಹೀನಾಯ ಮತ್ತು ದುರ್ಬಲ ಗೊಂಡಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಇದಕ್ಕೆ ಕಾರಣ ಬಾಜಪದ ಕೆಲವು ಪಟ್ಟಬದ್ಧ ನಾಯಕರು ನಮ್ಮ ಸಮುದಾಯದ ಜನರನ್ನು ಮತ ಬ್ಯಾಂಕನ್ನಾಗಿ ಮಾಡಿಕೊಂಡಿದ್ದಾರೆ. ಯಾವುದೇ ರಾಜಕೀಯ ಪ್ರಾತಿನಿಧ್ಯ ಕೊಡುತ್ತಿಲ್ಲ ಇದನ್ನು ನಾವು ಖಂಡಿಸುತ್ತೇವೆ ಹಾಗೂ ತಾವು ಅವಕಾಶ ಕೊಟ್ಟರೆ ನೂರಕ್ಕೆ ನೂರರಷ್ಟು ಈ ಅನ್ಯಾಯವನ್ನು ಘಂಟಾಘೋಷವಾಗಿ ನಿರೂಪಿಸುತ್ತೇವೆ. ಬಾಜಪ ಪಕ್ಷದಿಂದ ನಮ್ಮ ಸಮುದಾಯಕ್ಕೆ ನಿರ್ಲಕ್ಷ್ಯ ತೋರುತ್ತಿರುವುದು ಮತ್ತು ಪಕ್ಷದ ಸಿದ್ಧಾಂತವನ್ನು ನಮ್ಮ ಸಮುದಾಯ ಚಾಚು ತಪ್ಪದೇ ಪಾಲಿಸುತ್ತಿರುವುದರಿಂದ ಇವರು ಹೇಗಾದರೂ ನಮ್ಮ ಪಕ್ಷವನ್ನು ಬಿಡುವುದಿಲ್ಲ ಮತ್ತು ಪಕ್ಷದ ಸಿದ್ಧಾಂತವನ್ನು ಚಾಚು ತಪ್ಪದೇ ಪಾಲಿಸುತ್ತಿರುವುದರಿಂದ ಇದೆ ನಮ್ಮ ಸಮುದಾಯದ ದೌರ್ಬಲ್ಯ ಎಂದು ಭಾಜಪ ನಾಯಕರು ಭಾವಿಸಿದ್ದಾರೆ. ಇದರಿಂದ ರಾಜಕೀಯವಾಗಿ ನಮ್ಮ ಸಮುದಾಯ ಹಿಂದುಳಿಯಲು ಪ್ರಮುಖ ಕಾರಣವಾಗಿದೆ. ನಮ್ಮ ಸಮುದಾಯದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲವಿದ್ದರೂ
    ರಾಜ್ಯಮಟ್ಟದಲ್ಲಿ ಕನಿಷ್ಠ 2 ಅಥವಾ 3 ಜನ ನಮ್ಮ ಸಮುದಾಯದ ನಾಯಕರನ್ನು ಬೆಳಸದೆ ಇರುವುದು ಇದು ಪಕ್ಷಕ್ಕೆ ಶೋಭೆ ತರುವುದಿಲ್ಲ. ಇದನ್ನು ಮನಗಂಡ ಇತರರು ನಮ್ಮ ಸಮುದಾಯವನ್ನು ಕೇವಲವಾಗಿ ನೋಡುತಿದ್ದಾರೆ. ತಾವು ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿದ್ದೇ ಆದಲ್ಲಿ ನಮ್ಮ ಸಮುದಾಯ ಯಾವುದೇ ಸಮಸ್ಯೆಗೆ ಒಳಗಾದಾಗ ನಮ್ಮ ಸಮುದಾಯದ ಪ್ರತಿನಿಧಿಗಳು ಸದನದ ಒಳಗೆ ಮತ್ತು ಹೊರಗೆ ಸಮುದಾಯದ ಸಮಸ್ಯೆಗಳಿಗೆ ಬೆಳಕು ಚೆಲ್ಲಲು & ಭಾವನಾತ್ಮಕವಾಗಿ ಬೆಂಬಲಿಸಲು ನಮ್ಮ ಸಮುದಾಯದ ಪ್ರತಿನಿಧಿಗಳಿಂದ ಸಾಧ್ಯವಾಗುತ್ತದೆ. ಮತ್ತು ಅತ್ಯಂತ ಕಟೀಬದ್ಧ ಅದರಲ್ಲೂ ಕೆಲವು ವಿಧಾನ ಸಭಾ ಮತ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ಮೊದಲಿನಿಂದಲೂ ಭಾರತೀಯ ಜನತಾ ಪಾರ್ಟಿಗೆ ತಮ್ಮ ಬೆಂಬಲ ಮತವನ್ನು ಚಲಾಯಿಸುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಹಾಗೂ ಬಿಜೆಪಿಯ ಪ್ರಮುಖ ಅಜೆಂಡಾ ಹಿಂದುತ್ವಕ್ಕೆ ನಮ್ಮ ಸಮುದಾಯ ಬೆಂಬಲ ನಿರಂತರವಾಗಿದೆ. ಅಲ್ಲದೆ ಭಾರತೀಯ ಜನತಾ ಪಕ್ಷಕ್ಕೆ ದೇಶದಾದ್ಯಂತ ನಮ್ಮ ಸಮುದಾಯವು ತನು-ಮನ ಧನದಿಂದ ಬೆಂಬಲಿಸುವ ಜೊತೆಗೆ ತ್ಯಾಗ ಬಲಿದಾನಕ್ಕೂ ಕೂಡ ಸಿದ್ಧರಿದ್ದಾರೆ. ಆದರೆ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ, ಪಕ್ಷದಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ಮತ್ತು ನಮ್ಮ ಸಮುದಾಯ ಹೆಚ್ಚಿರುವ ಮತ ಕ್ಷೇತ್ರಗಳಲ್ಲಿ ರಾಜಕೀಯ ಪ್ರಾತಿನಿಧ್ಯದಿಂದ ಸತತವಾಗಿ ವಂಚಿತರಾಗುತ್ತಿದ್ದೇವೆ. ರಾಜ್ಯದ ನಾಯಕರು ತಮ್ಮ ಮನಸೋ ಇಚ್ಛೆಯಂತೆ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟನ್ನು ನೀಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಮುಂದಿನ ಬಾರಿ ನೋಡೊಣ, ತಾವು ತಡವಾಗಿ ಬಂದಿದ್ದೀರಿ, ಬೇಗ ಹೋದಾಗ ಇನ್ನೂ ಬೇಕಾದಷ್ಟು ಕಾಲಾವಕಾಶ ಇದೆ ಎಂದು ಸಮಜಾಯಿಸಿ ನಮ್ಮ ಸಮುದಾಯವನ್ನು ಕಡೆಗಣಿಸುತ್ತ ಕೇವಲ ಮತಕ್ಕಾಗಿ ಮಾತ್ರ ಬಳಸಿಕೊಂಡು ಹೀಯಾಳಿಸುತ್ತಿದ್ದಾರೆ. ರಾಜ್ಯ ನಾಯಕರು ತಮ್ಮ ಕುಟುಂಬದ ಸದಸ್ಯರಿಗೆ ಅಥವಾ ಸ್ವಜಾತಿಯವರಿಗೆ ಅಥವಾ ತಮ್ಮ ಬೇಕಾದವರನ್ನು ಮಾತ್ರ ಪರಿಗಣಿಸಿ ರಾಜಕೀಯವಾಗಿ ಬೆಳೆಸುತ್ತಿದ್ದಾರೆ. ಇದರಿಂದ ಒಂದು ದಿನ ಖಂಡಿತವಾಗಿಯೂ ನಮ್ಮ ಸಮುದಾಯದ ತಾಳ್ಮೆಯ ಕಟ್ಟೆಯೊಡೆದು ಪಕ್ಷದಿಂದ ವಿಮುಖರಾಗುವ ಸಾಧ್ಯತೆ ಇದೆ. ಅದಕ್ಕಾಗಿ ರಾಷ್ಟ್ರಮಟ್ಟದ ನಾಯಕರು ಹಾಗೂ ರಾಜ್ಯಮಟ್ಟದ ನಾಯಕರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಈ ಎಲ್ಲ ಅಂಶಗಳನ್ನು ಪರಿಗಣಿಸಿ ನಮ್ಮ ಸಮಾಜದ ನಾಯಕರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೀದರ, ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟು ಸಾಮಾಜಿಕ ನ್ಯಾಯ, ಪಕ್ಷದಲ್ಲಿ ಸೂಕ್ತ ರಾಜಕೀಯ ಸ್ಥಾನಮಾನ ಮತ್ತು ರಾಜಕೀಯ ಪ್ರಾತಿನಿಧ್ಯ ಒದಗಿಸಿ ಭಾರತೀಯ ಜನತಾ ಪಕ್ಷದೊಂದಿಗೆ ನಿರಂತರವಾಗಿ & ಅಚಲವಾಗಿ ನಮ್ಮ ಸಮುದಾಯ ನಿಲ್ಲುವಂತೆ ನೋಡಿಕೊಳ್ಳುಲು ತಮ್ಮಲ್ಲಿ ವಿನಂತಿ.
    ವಂದನೆಗಳೊಂದಿಗೆ
    ತಮ್ಮ ವಿಶ್ವಾಸಿ
    CLICK THIS LINK AND PRESS SEND BUTTON TO SUPPORT MARATHA COMMUNITY tinyurl.com/3mk9ms2x
    #marathacommunity
    #karnataka
    #election2024
    #loksabhaelections2024
    #marathaleader

ความคิดเห็น • 5

  • @SantoshKumar-vw3so
    @SantoshKumar-vw3so 6 หลายเดือนก่อน +1

    Very nice 👌

  • @nandikondaramesh1259
    @nandikondaramesh1259 6 หลายเดือนก่อน +1

    Great Work For Chatrapathi Shivaji Maharaj We Need National Holiday For Shivaji Maharaj Jayanti

  • @swamysabbani62
    @swamysabbani62 6 หลายเดือนก่อน +1

    Jai sriram,Jai chatrapati shivaji maharaj ki jai ,🙏🙏

  • @ganpathraopanchbhai56
    @ganpathraopanchbhai56 6 หลายเดือนก่อน +1

    Jai bhavani Jai shivaji

  • @mane.anand007
    @mane.anand007 6 หลายเดือนก่อน +1

    Jai shivray