ಬೆಳಗಾವಿಯಲೀ ಹಲವು ಬೇಡಿಕೆ ಅಗ್ರಹಿಸಿ ಪ್ರತಿಭಟನೆ

แชร์
ฝัง
  • เผยแพร่เมื่อ 21 ต.ค. 2024
  • #dssProtest #belagavi #ಬೆಳಗಾವಿ
    ಸರ್ಕಾರದ ವಿರುದ್ಧ ಪ್ರತಿಭಟಿಸಿದ ದಲಿತ ಸಂಘಟನೆ
    ಬೆಳಗಾವಿ:ಎಸ್‌ಸಿಎಸ್ ಪಿ/ ಟಿಎಸ್ ಪಿ ಕಾಯ್ದೆಯನ್ನು ಉಲ್ಲಂಘಿಸಿ ಹಣದ ದುರುಪಯೋಗ, ವಾಲ್ಮೀಖಿ ಅಭಿವೃದ್ಧಿ ನಿಗಮದ ಅವ್ಯವಹಾರ, ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ, ಎಸ್.ಸಿ ಎಸ್.ಟಿಗಳ ವಿರೋಧಿ ಸಮಾಜ ಕಲ್ಯಾಣ ಇಲಾಖೆಯ ಎ.ಸಿ.ಎಸ್ ಅವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
    ಇಂದು ಬೆಳಗಾವಿ ನಗರದದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟಿಸುವ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು. ಕಳೆದ ಒಂದು ವರ್ಷದಿಂದ ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿ ಮೀಸಲಿಟ್ಟ SCSP/TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಸುಮಾರು 25 ಸಾವಿರ ಕೋಟಿ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಇದರಿಂದ ಈ ಸಮುದಾಯಗಳಿಗೆ ಸರ್ಕಾರ ಅನ್ಯಾಯ ಮಾಡಿದೆ. ಪಾಲ್ಮೀಖಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಿಂದ ಕೊಟ್ಯಾಂತರ ರೂಪಾಯಿಗಳ ಹಣವನ್ನು ರಾಜಕಾರಣಿಗಳು ಮತ್ತು ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದು ಸರ್ಕಾರದ ವೈಪಲ್ಯವಾಗಿದೆ. ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಮುಡಾ ಹಗರಣದಲ್ಲಿ ಸಿಎಂ ಅವರೆ ನೇರವಾಗಿ ಭಾಗಿಯಾಗಿದ್ದಾರೆ. ಎಸ್.ಸಿ/ಎಸ್.ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ SCSP/TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದನ್ನು ಕೂಡಲೇ ವಾಪಸ ನೀಡಬೇಕು. ಮೂಡಾ ಹಗರಣವನ್ನು ಸಿ.ಬಿ.ಐ.ತನಿಖೆಗೆ ವಹಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಎ.ಸಿ.ಎಸ್. ಮಣಿವಣ್ಣನ್ ರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ವಸತಿ ಶಾಲೆಗಳ ನೇಮಕದಲ್ಲಿ ವಿಧಿಸಿರುವ ನಿಬಂಧನೆಗಳನ್ನು ಕೂಡಲೇ ರದ್ದುಪಡಿಸಿ ಎಲ್ಲಾ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಡಬೇಕು. ಮುಡಾ ಹಗರಣದಲ್ಲಿ ಭಾಗಿಯಾಗಿರುವ ಭ್ರಷ್ಟರನ್ನು ಕೂಡಲೇ ಬಂಧಿಸಬೇಕು ಇದರ ನೇರ ಹೊಣೆಗಾರಿಕೆಯನ್ನು ಮುಖ್ಯ ಮಂತ್ರಿಗಳು ವಹಿಸಬೇಕು. ಈ ಪ್ರಕರಣವನ್ನು ಕೂಡಲೇ ಸಿ.ಬಿ.ಐ.ತನಿಖೆಗೆ ನೀಡಬೇಕು ಹಾಗೂ ಇರೆ ಬೇಡಿಕೆಗೆ ಆಗ್ರಹಿಸಲಾಯಿತು.

ความคิดเห็น •