DEVI APARAADHA KSHMAAPANA STHOTRA( ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ)| ಶ್ರೀಮದ್ ಶಂಕರಾಚಾರ್ಯರು|ದ ರಾ ಬೇಂದ್ರೆ

แชร์
ฝัง
  • เผยแพร่เมื่อ 18 ก.ย. 2024
  • ಸಾಹಿತ್ಯ:- ಮೂಲ ರಚನೆ ಸಂಸ್ಕೃತ ಶ್ರೀಮದ್ ಶಂಕರಾಚಾರ್ಯರು
    ಕನ್ನಡ ಭಾವಾನುವಾದ :- ದ ರಾ ಬೇಂದ್ರೆ
    ಸಂಯೋಜನೆ‌ ಹಾಗೂ ಗಾಯನ :- ರಾಘವೇಂದ್ರ ಬೀಜಾಡಿ
    ಕೀಬೋರ್ಡ್ :- ದುಷ್ಯಂತ್
    ರಿದಂಪ್ಯಾಡ್ :- ವೈಷ್ಣವ್
    ಸೌಂಡ್ ಎಂಜಿನಿಯರ್:- ನಾಗರಾಜ್
    ಅರವಿಂದ್ ಸ್ಟುಡಿಯೋ
    #shankracharya #devotionalsongs #raghavendrabeejadi #himalayas
    video credits. we use copy right free videos .. our humble pranmas to all the video makers
    • Happy Durga Puja, Navr...
    • Maa Bhavani Video Back...
    • Durga maa navratri fir...
    • काली माँ - Kali Mata -...
    • Free Copyright Video B...
    • Durga Background Video...
    • God Durga Devi Animate...
    ಸಾಹಿತ್ಯ
    ದೇವೀ ಅಪರಾಧಕ್ಷಮಾಪಣ ಸ್ತೋತ್ರ
    ಮಂತ್ರವರಿಯೆ, ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।
    ಆಹ್ವಾನವರಿಯೆ, ನಾ ಧ್ಯಾನವರಿಯೆ, ನಾನರಿಯೆ ಶ್ರುತಿಯ ಕಥೆಯಾ।।
    ಮುದ್ರೆಗಿದ್ರೆಗಳ ಅರಿಯೆ ನಾನು, ಕೂಸಾಗಿ ತೆರೆವೆ ಬಾಯಿ!
    ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ!||
    1
    ಗೊತ್ತಿಲ್ಲ ವಿಧಿಯು, ಮೈಗಳ್ಳ ನಾನು, ಕೈಯ್ಯಲ್ಲಿ ಕಾಸು ఇల్ల,
    ನಡೆಯಲಾರೆ ಒಳಗಾಗಿ, ಚರಣ ಕೈಬಿಟ್ಟು ಜಾರಿತಲ್ಲ! ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ!
    ಹುಟ್ಟಬಹುದಲಾ ಕೆಟ್ಟಮಗುವು ; ಇರಲಾಸ ಕೆಟ್ಟ ತಾಯಿ!||
    2
    ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |ವಿರಲ-ತರಲ, ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ ಬಿಡಬೇಡ ಕೈಯ, ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।
    ಕೆಟ್ಟ ಮಗುವು ಹೋ! ಹುಟ್ಟಬಹುದು : ಇರಬಹುದೆ ಕೆಟ್ಟ ತಾಯಿ?"||
    3
    ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ । ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ!
    ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ, ಇವಳೆ, ತಾಯೆ?॥
    4
    ಎಷ್ಟಂತ ಪೂಜೆ, ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ!
    ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ!
    ಓ ತಾಯಿ ನಿನ್ನ ಕೃಪೆ ಸಾಕು, ಉಳಿದವರು ಹಿಡಿಯಲೆನ್ನ ಬಿಡಲಿ!
    ಆಧಾರವಿರದೆ, ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ!||
    5
    ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ! ಬಾಯಿಬಡಕ ನಾಯಡಗಂಬ ಜನವಾಣಿ ಅಮೃತಧಾಮ
    ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ ಜನನಿ ನಿನ್ನ ಜಪಮಹಿಮೆಯರಿಯದವ ಹೌದು ತೀರ ಬಡವll
    6
    ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ!
    ಜಡೆಯ ಕಟ್ಟಿ, ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ
    ತಲೆಯಬುರಡೆ ಕೈಯಲ್ಲಿ, ಭೂತಗಣ ಸುತ್ತಿಕೊಂಡೆ ಇರುವ
    ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ||
    7
    ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ! ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ!!
    ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ!
    ಓ ಭವಾನಿ ರುದ್ರಾಣಿ ಶಿವಶಿವೇ ಎಂದು ಜಪಿಸುತಿರಲಿ!||
    8
    ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ! ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ!
    ಓ ಶ್ಯಾಮೆ ! ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ
    ಅದು ನಿನಗೆ ಸಹಜ, ಇದು ನನಗೆ ಸಹಜ, ಕರುಣೆಯನೆ ಬೇಡುತಿರುವೆ!!||
    9
    ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ! ಹೇ ದುರ್ಗೆ ! ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ!!
    ಇದು ಢೋಂಗು, ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ।
    ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ?॥
    10
    ಜಗದಂಬೆ, ಬೇರೆ ವೈಚಿತ್ರ್ಯ ಬೇಕೆ? ಕರುಣೆಯಲಿಮಾಡು ಎಲ್ಲ !
    ಅಪರಾಧವೆಷ್ಟೆ ಮಾಡಿದರು ಮಗುವು, ತಾಯೇನೂ ಬಿಡುವದಿಲ್ಲ
    ಪಾಪಘ್ನಿ ನಿನ್ನ ಸಮರಿಲ್ಲ, ಪಾಪದಲಿ ನನಗೆ ಇಲ್ಲ ಜೋಡು!
    ಮಹದೇವಿ! ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು!!
    ಶ್ರೀಮದ್ ಶಂಕರಾಚಾರ್ಯರ ಸ್ತೋತ್ರದ ಭಾವಾನುವಾದ.
    🖋 ದ ರಾ ಬೇಂದ್ರೆ
    • Green Leaves Forest Sl...

ความคิดเห็น • 76

  • @mahadevibm8224
    @mahadevibm8224 หลายเดือนก่อน +3

    ತುಂಬಾ ತುಂಬಾ ಚೆನ್ನಾಗಿದೆ

  • @poornimaudupa9033
    @poornimaudupa9033 หลายเดือนก่อน

    ತುಂಬಾ ಚೆನ್ನಾಗಿದೆ 🙏🙏🙏

  • @roopaashok7668
    @roopaashok7668 6 หลายเดือนก่อน +8

    ಬಾವಗೀತೆಗಳ ಸವಿ ಉಂಡಾಯ್ತು ಇನ್ನೂ ನಿಮ್ಮ ಸುಮದರ ಧ್ವನಿ ಯಲ್ಲಿ ಭಕ್ತಿಗೀತೆ ಕೇಳುವ ಅವಕಾಶ 🙏🏻🙏🏻👏🏻👏🏻

  • @nalinian5943
    @nalinian5943 5 หลายเดือนก่อน +3

    ಎಷ್ಟು ಸಲ ಕೇಳಿದ್ರೂ ತೃಪ್ತಿ ಆಗೋಲ್ಲ, ಕೇಳ್ತಾ ಕೇಳ್ತಾ ಕಣ್ಣೀರು ತರಿಸುತ್ತೆ. ಅಷ್ಟು ಭಾವಪೂರ್ಣವಾಗಿ ಹಾಡಿದ್ದೀರಿ...ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಗಾನಲಹರಿ
    ಹೀಗೇ ಮುಂದುವರೆಯಲಿ.

  • @user-xm4gh3qs1t
    @user-xm4gh3qs1t 26 วันที่ผ่านมา

    ಧನ್ಯವಾದಗಳು👌👌🙏🙏

  • @vilasinipoojary4091
    @vilasinipoojary4091 หลายเดือนก่อน

    Wow nanu danya 🎉🎉

  • @anasuyavishweshwar7831
    @anasuyavishweshwar7831 4 หลายเดือนก่อน

    🙏🙏🙏🙏🙏

  • @maheshbannihatti813
    @maheshbannihatti813 วันที่ผ่านมา

    ❤❤❤❤

  • @bn3chub333
    @bn3chub333 5 หลายเดือนก่อน +2

    ಮೈ ಮನ ರೋಮಾಂಚನದಿಂದ ಪುಳ್ಕಿತಗೊಂಡಿತು.ದೇವಿ ನಿಮ್ಮೆಲ್ಲರಿಗೂ ಶುಭ ಆಶೀರ್ವಾದ ಮಾಡಲಿ. ಗಾಯತ್ರಿ ಸ್ತೋತ್ರಂ ಕೂಡ ಅತ್ಯದ್ಭುತ ವಾಗಿ ಮೂಡಿ ಬಂದಿದೆ.

  • @nagalathaudagatti5645
    @nagalathaudagatti5645 6 หลายเดือนก่อน +1

    ಜಗದ್ಗುರುಗಳ ಸ್ತೋತ್ರ. ನಿಮ್ಮ ಕಂಠ ದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏🙏🙏🚩🚩🚩🌺🌺🌺🌺

  • @Dearappu18
    @Dearappu18 3 หลายเดือนก่อน

    🙏🏻

  • @jayalaxmibhat8266
    @jayalaxmibhat8266 6 หลายเดือนก่อน +1

    ಆಹಾ! ಎಷ್ಟು ಸುಂದರ ರಚನೆ ಮತ್ತು ಗಾಯನ! ಧನ್ಯಳಾದೆ.🙏🙏🙏

  • @bharathikarupakula7005
    @bharathikarupakula7005 3 หลายเดือนก่อน

    ❤️❤️🙏🙏

  • @rajeswarimurthy3765
    @rajeswarimurthy3765 6 หลายเดือนก่อน +1

    ಕಣ್ತುಂಬಿ ಬಂತು, ಮನದುಂಬಿ ಬಂತು, ಮತ್ತೆ ಮತ್ತೆ ಕೇಳುತ್ತಿದ್ದೇನೆ. ಜೈ ಮಾ.

  • @prasannatambake2928
    @prasannatambake2928 หลายเดือนก่อน

    ❤❤❤🎉🎉❤❤❤

  • @abhilashpandralli8508
    @abhilashpandralli8508 4 หลายเดือนก่อน +1

    ಕೇಳುಗರ ಕಿವಿಯಲ್ಲಿ ಈ ಜ್ಞಾನಾಮೃತ ಪ್ರವಹಿಸಿ ಸಾಹಿತ್ಯ ಹೃದಯ ಸೇರುವಂತಿದೆ ❤🙏🏻

  • @shailajaar4649
    @shailajaar4649 6 หลายเดือนก่อน +1

    ಕಣ್ಮುಚ್ಚಿ ಕೇಳುತಿದ್ರೆ ಆಹಾ.. ಅದ್ಭುತವಾದ ಲೋಕದಲ್ಲಿ ತೇಲುವಂತಿದೆ 🙏🙏🙏

  • @shylajakshiumesh9047
    @shylajakshiumesh9047 3 หลายเดือนก่อน

    ಬಹಳ ಚೆನ್ನಾಗಿದೆ. ಈ ಹಾಡಿಗಾಗಿ ಧನ್ಯವಾದ ಗಳು.

  • @chandrashekhar-sh4es
    @chandrashekhar-sh4es 6 หลายเดือนก่อน +1

    ತುಂಬಾ ಅದ್ಭುತವಾಗಿ ಮೂಡಿಬಂದಿದೆ.. ಕೇಳಲು ತುಂಬಾ ಖುಷಿಯಾಗುತ್ತದೆ

  • @mallikasnayak6318
    @mallikasnayak6318 6 หลายเดือนก่อน +1

    ಆಹಾ!!🙏🙏🙏

  • @janakihegde58
    @janakihegde58 6 หลายเดือนก่อน +1

    Very nice
    ಭಕ್ತಿಭಾವ ತುಂಬಿದ ಗೀತೆ 😊

  • @ravishankaradiga7758
    @ravishankaradiga7758 6 หลายเดือนก่อน +1

    Shree Mata..🔱🙏

  • @bhuvanasury_a
    @bhuvanasury_a 4 หลายเดือนก่อน

    ವರ್ಣಿಸಲು ಪದವಿಲ್ಲ ಗುರುಗಳೇ, ದಿನಕ್ಕೆ ನಾಲ್ಕು ಬಾರಿ ಕೇಳುತ್ತೇನೆ. ಹೋಗಿ ತಾಯಿಯ ಜಪ ಮಾಡೋಣ ಅನಿಸುತ್ತದೆ ಹಾಗೆ ಕಣ್ಣಿನಲ್ಲಿ ನೀರು ಬಂದು ಭಾವ ಶುದ್ದಿಯಾಗುತ್ತದೆ. ಈ ಹಾಡನ್ನು ಕೇಳುವಾಗ ಜಗನ್ಮಾತೆಯನ್ನು ಧ್ಯಾನಿಸಲು ಇಚ್ಛಾಶಕ್ತಿ ಜಾಗೃತವಾಗುತ್ತದೆ. ನಿಮಗೆ ಕೋಟಿ ಕೋಟಿ ನಮನಗಳು..... 🙏🏻🙏🏻🙏🏻🙏🏻🙏🏻💐

  • @shashihn9626
    @shashihn9626 2 หลายเดือนก่อน

    ಸಾಹಿತ್ಯದ ತಕ್ಕಂತೆ ತಮ್ಮ ಗಾಯನ ಮನಸ್ಸಿಗೆ ಆನಂದ ತರುವ ಮನದಾಳಕ್ಕೆ ಕರೆದು ಕೊಂಡು ಹೋಗುತ್ತದೆ. ಧನ್ಯೋಸ್ಮಿ 😊🙏💕

  • @Vinutha2368
    @Vinutha2368 6 หลายเดือนก่อน

    ದೇವಿ ಸ್ತೋತ್ರವು ನಿಮ್ಮ ಧ್ವನಿಯಲ್ಲಿ ಅದ್ಬುತವಾಗಿ ಬಂದಿದೆ👌👌❤🙏

  • @veenasm3334
    @veenasm3334 6 หลายเดือนก่อน +1

    ಧನ್ಯವಾದಗಳು,

  • @user-py2nq8df9k
    @user-py2nq8df9k 6 หลายเดือนก่อน

    Bendreyavara sahityakke bendreyare sati.hadu Keli janma sarthakavayitu❤❤❤❤❤

  • @umasundar177
    @umasundar177 3 หลายเดือนก่อน

    ಅದ್ಭುತವಾಗಿದೆ 🙏🙏🙏🙏

  • @om1579
    @om1579 6 หลายเดือนก่อน +1

    ❤❤❤❤❤❤❤❤

  • @ushathimmapaiah5105
    @ushathimmapaiah5105 6 หลายเดือนก่อน

    ತುಂಬ ಚೆನ್ನಾಗಿ ಇದೇ. ಬರೆದಿರುವುದು, ಹಾಗೂ ಹಾಡಿರುವುದು ಅದ್ಭುತ..

  • @MythiliSRam
    @MythiliSRam 4 หลายเดือนก่อน

    Soulful divine devotional stothram beautiful singing

  • @shailakulkarni275
    @shailakulkarni275 6 หลายเดือนก่อน

    O bhavani shivashive namo namah

  • @sughoshnigale
    @sughoshnigale 3 หลายเดือนก่อน

    ತುಂಬಾ ಚೆನ್ನಾಗಿದೆ. ಧನ್ಯೋಸ್ಮಿ.

  • @VeenadeviAgile
    @VeenadeviAgile 4 หลายเดือนก่อน

    Jagadguru Shankaracharya jayanti munde adhbutha savi karngalu pavanavaytgu. Ellarigu pranamagalu.

  • @nmnayankumar3495
    @nmnayankumar3495 6 หลายเดือนก่อน +1

    Super sir ❤

  • @gayatridevi3484
    @gayatridevi3484 6 หลายเดือนก่อน

    Tumba Sarala kannadadalli ❤

  • @Vijaykumar-wi9dg
    @Vijaykumar-wi9dg 5 หลายเดือนก่อน

    ❤ ತುಂಬಾ ಚೆನ್ನಾಗಿದೆ ಇದೇ ರೀತಿ ಕನಕ ದಾರ ಸ್ತೋತ್ರವನ್ನು ದಯವಿಟ್ಟು ಕನ್ನಡದಲ್ಲಿ ಅನುವಾದ ಮಾಡಿ ಹಾಡಿ ಎಂದು ಕೇಳಿಕೊಳ್ಳುತ್ತೇನೆ🙏🙏🙏

  • @neerajasundaresh2582
    @neerajasundaresh2582 5 หลายเดือนก่อน

    ಅದ್ಭುತವಾಗಿದೆ ವಂದನೆಗಳು

  • @sandhyarajkamal269
    @sandhyarajkamal269 6 หลายเดือนก่อน

    Super 💯😍

  • @chetananaik6871
    @chetananaik6871 4 หลายเดือนก่อน +1

    I'm your fan

  • @BasammakbBasu
    @BasammakbBasu 5 หลายเดือนก่อน

    🙏🙏

  • @chetananaik6871
    @chetananaik6871 4 หลายเดือนก่อน

    🙏🙏🙏🙏 Super singing

  • @pallavin7217
    @pallavin7217 5 หลายเดือนก่อน

    👌👌🙏🙏🙏🙏

  • @sharanappasharanappa5166
    @sharanappasharanappa5166 5 หลายเดือนก่อน

    ಅದ್ಭತ ಗುರುವೆ

  • @basavarajAkalawadi-qy1qw
    @basavarajAkalawadi-qy1qw 6 หลายเดือนก่อน

    🙏ಇನ್ನು ಕೇಳಬೇಕು ಅನಿಸುತಿದೆ

  • @murugeshaa2684
    @murugeshaa2684 6 หลายเดือนก่อน

    ಶಿವೆ 🙏

  • @geethan5917
    @geethan5917 4 หลายเดือนก่อน

    ಅದ್ಭುತ ಸರ್, ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ

  • @PrasadKashyap
    @PrasadKashyap 5 หลายเดือนก่อน

    This sooo beautiful. Bendre has maintained both the poetic beauty and spiritual divinity of the original composition.
    I don't believe that the original was written by Bhagawatpada Adi Shankaracharya. He did not live to be 80+ years old. It must have been written by some other Shankaracharya of one of the mutts.

    • @RaghavendraBeejadi
      @RaghavendraBeejadi  5 หลายเดือนก่อน

      ಬಹುಶಃ ಅವರು ಇದನ್ನು ಇತರರಿಗೆ ಬರೆದಿರಬಹುದು. ಸಾಮಾನ್ಯರು ಈ ರೀತಿ ಕ್ಷಮಾಪಣೆ ಕೇಳಲಿ ಎಂದು. ಏಕೆಂದರೆ ಶಂಕರರಿಗೆ ಮಂತ್ರ. ಕಾಶ್ಮೀರ ಶೈವ ತಂತ್ರ. ಶ್ರೀಚಕ್ರ ಯಂತ್ರ ಎಲ್ಲಾ ತಿಳಿದಿದ್ದಾಗ ತನಗೆ ಗೊತ್ತಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಭಕ್ತರಿಗಾಗಿ ಭಕುತನು ಹೀಗೆ ಕೇಳಲಿ ಎದು ಶಂಕರಾಚಾರ್ಯರು ಬರೆದಿರಬಹುದಲ್ಲವೆ!?/

    • @rajeswarimurthy3765
      @rajeswarimurthy3765 5 หลายเดือนก่อน

      ಹೌದು

    • @VigneshwaraMG
      @VigneshwaraMG 4 หลายเดือนก่อน

      In Sanskrit it is not mentioned 80+ year old. Mentioned before I cross my half of the age.

    • @rajeswarimurthy3765
      @rajeswarimurthy3765 4 หลายเดือนก่อน

      ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ

  • @51veena
    @51veena 5 หลายเดือนก่อน

    @ 51 veena ಇಂದ ಕಳುಹಿಸಿದ್ದೇನೆ ಅದೇ ನೋಡಿ ಸರ್

  • @51veena
    @51veena 5 หลายเดือนก่อน

    ಮೇಲಿನ ಲಿಂಕ್ ನೋಡಿ

  • @51veena
    @51veena 6 หลายเดือนก่อน

    TH-cam link kalisiddeeni keli sir

    • @RaghavendraBeejadi
      @RaghavendraBeejadi  5 หลายเดือนก่อน

      ಇನ್ನೊಮ್ಮೆ ಕಳಿಸಿಕೊಡಿ.. ಇಲ್ಲಿ ಕಾಣಲಿಲ್ಲ

    • @51veena
      @51veena 5 หลายเดือนก่อน

      th-cam.com/video/ObN1hQtxkcc/w-d-xo.htmlsi=5-tTUew2r3aGHp7g@@RaghavendraBeejadi

    • @ambikanarayanaswamy315
      @ambikanarayanaswamy315 5 หลายเดือนก่อน

      ಆ ತಾಯಿ ಮಗನ ನಡುವೆ ಪ್ರೀತಿ ಯ ಅನುಕಂಪ ಧಾರೆಯಾಗಿ ಹರಿಯಿತು.ಜೈ ಗುರುದೇವ 🙏🙏

  • @BhavaniAAKedkarjaisrikri-nw1xt
    @BhavaniAAKedkarjaisrikri-nw1xt 5 หลายเดือนก่อน

    🙏🙏🙏

  • @chayachaya7728
    @chayachaya7728 6 หลายเดือนก่อน

    🙏🙏🙏🙏🙏

  • @dattatreyasagar4098
    @dattatreyasagar4098 6 หลายเดือนก่อน

    😊🙏🙏🙏

  • @Lachamanna.1975
    @Lachamanna.1975 6 หลายเดือนก่อน

    ❤❤❤

  • @Rakshithbhat12
    @Rakshithbhat12 6 หลายเดือนก่อน

    🙏🙏🙏