September 1, 2016Srividya Guruprasad ವೃಂದಾವನದೇವಿ ನಮೋ ನಮೋ, ಚೆಲ್ವ ಮಂದರಧರನ ಮನಃಪ್ರಿಯಳೆ ವೃಂದಾವನ ದೇವಿ ನಮೋ ನಮೋ ||ಪ|| ನಿನ್ನ ಸೇವಿಸಿ ಉದಕವನೆರೆಯಲು ಮುನ್ನ ಮಾಡಿದ ಪಾಪ ಹೋಗುವುದು ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ ಉನ್ನಂತ ವೈಕುಂಠ ಪದವೀವಳೆ || ಒಂದೊಂದು ದಳದಲ್ಲಿ ಒಂದೊಂದು ಮೂರುತಿ ಸಂದಣಿಸುವೆ ಬಹು ಗುಪಿತದಲಿ ಬಂದು ಕುಂಕುಮ ಶಂಖಚಕ್ರ ಧರಿಸಿದರೆ ತಂದೆ ನಾರಾಯಣ ಕರೆದೊಯ್ಯುವ || ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ ಕೊರಳೊಳು ಧರಿಸಿ ಕರ್ಣದೊಳಿಟ್ಟರೆ ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ ಹರಿಯು ತನ್ನವರೆಂದು ಕೈ ಪಿಡಿವ || ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ ಉತ್ತಮ ವೈಕುಂಠ ಪದವೀವಳೆ ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು ಕರ್ತುನಾರಾಯಣ ಕರೆದೊಯ್ವನು || ಆವಾವಪರಿಯಲ್ಲಿ ಸೇವೆಯ ಮಾಡಲು ಪಾವನ ವೈಕುಂಠಪದವೀವಳೆ ದೇವ ಶ್ರೀ ಪುರಂದರವಿಠಲರಾಯನ ದೇವಿ ನಿನ್ನ
Wow..tumba Chennagi hadiddi 👌👌🙏🙏🙏
ತುಂಬಾ ಚೆನ್ನಾಗಿ ಹಾಡಿದ್ದೀಯಾ 👌👌👌 super
ಬಹಳ ಒಳ್ಳೆಯದು ಆಗಿದೆ. ಸುಶ್ರಾವ್ಯವಾಗಿ ಹಾಡಿದ್ದಿ.👌👌
Very nice melodies voice
September 1, 2016Srividya Guruprasad
ವೃಂದಾವನದೇವಿ ನಮೋ ನಮೋ, ಚೆಲ್ವ
ಮಂದರಧರನ ಮನಃಪ್ರಿಯಳೆ
ವೃಂದಾವನ ದೇವಿ ನಮೋ ನಮೋ ||ಪ||
ನಿನ್ನ ಸೇವಿಸಿ ಉದಕವನೆರೆಯಲು
ಮುನ್ನ ಮಾಡಿದ ಪಾಪ ಹೋಗುವುದು
ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ
ಉನ್ನಂತ ವೈಕುಂಠ ಪದವೀವಳೆ ||
ಒಂದೊಂದು ದಳದಲ್ಲಿ ಒಂದೊಂದು ಮೂರುತಿ
ಸಂದಣಿಸುವೆ ಬಹು ಗುಪಿತದಲಿ
ಬಂದು ಕುಂಕುಮ ಶಂಖಚಕ್ರ ಧರಿಸಿದರೆ
ತಂದೆ ನಾರಾಯಣ ಕರೆದೊಯ್ಯುವ ||
ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ
ಕೊರಳೊಳು ಧರಿಸಿ ಕರ್ಣದೊಳಿಟ್ಟರೆ
ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ
ಹರಿಯು ತನ್ನವರೆಂದು ಕೈ ಪಿಡಿವ ||
ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ
ಉತ್ತಮ ವೈಕುಂಠ ಪದವೀವಳೆ
ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು
ಕರ್ತುನಾರಾಯಣ ಕರೆದೊಯ್ವನು ||
ಆವಾವಪರಿಯಲ್ಲಿ ಸೇವೆಯ ಮಾಡಲು
ಪಾವನ ವೈಕುಂಠಪದವೀವಳೆ
ದೇವ ಶ್ರೀ ಪುರಂದರವಿಠಲರಾಯನ
ದೇವಿ ನಿನ್ನ
Very nice 👌👌👍
Super...
Very nice👏
Which raga madam