ಕನ್ನಡನಾಡಿನ ಆಚಾರ್ಯರಾಗಿ ಸಿಕ್ಕಿದ ಶ್ರೀಮಧ್ವಗುರುಗಳು ಕೇವಲ ಮಾಧ್ವರ ಸೊತ್ತಲ್ಲ.. ಸಹೃದಯತೆಯಿಂದ ಸತ್ಯ ಒಪ್ಪಿಕೊಳ್ಳುವ ಎಲ್ಲ ವರ್ಗದವರ ಮಾರ್ಗದರ್ಶಕರು. ನಡೆಯಿಂದ ನುಡಿಯಿಂದ ಒಂದೆ ತೆರನಾಗಿ ಬದುಕಿದ ಅವರು ವಿಶ್ವದ ಸೋಜಿಗಗಳಲ್ಲಿ ಒಬ್ಬರು. ಹೊಸದಾದ ಯಾವ ವಾದವನ್ನೂ ಹುಟ್ಟು ಹಾಕದೆ ವ್ಯಾಸರ ವೇದಗಳ ಹೃದಯದಲ್ಲೇನಿದೆಯೋ ಅದನ್ನೆ ನಿರ್ಬಿಡೆಯಿಂದ ಎತ್ತಿತೋರಿದರು. ಸಾಮಾನ್ಯವಾಗಿ ಯಾವ ದೊಡ್ಡವರನ್ನೂ ಅವರ ಅನುಯಾಯಿಗಳು ಸರಿಯಾಗಿ ತಿಳಿಯದೆ ಇತರರ ಕೂಡೆ ತಮ್ಮ ಹಿರಿತನವನ್ನು ಹೆಮ್ಮೆಯನ್ನು ಅಭಿಮಾನದಿಂದ ಕಾಣುತ್ತಾರೆ; ಸಮರ್ಥಿಸುತ್ತಾರೆ. ಆಚಾರ್ಯರನ್ನು ತಾಳ್ಮೆಯಿಂದ ಅವರ ಗ್ರಂಥಗಳಿಂದ ಪರಿಚಯಿಸಿಕೊಂಡವರು ಜಗದ ಎಲ್ಲ ವೈವಿಧ್ಯವನ್ನು ಪ್ರೀತಿಸುವವರಾಗುವರು. ಅವರು ಭಾಷೆಯನ್ನು ದುಡಿಸಿಕೊಳ್ಳುವ ಸೊಗಡು, ಪ್ರಮೇಯಗಳ ನಿರೂಪಣೆಯ ಶೈಲಿ, ಅಸಾಧಾರಣವಾದ ಪ್ರತಿಭೆ, ವೇದ-ಪುರಾಣ-ಇತಿಹಾಸಗಳನ್ನು ಅರ್ಥೈಸುವ ರೀತಿ, ಪ್ರಾಪಂಚಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ, ವಿಷಯಗಳ ನಿಷ್ಕೃಷ್ಟ ವಿವರಣೆ ಸಾಧಕನನ್ನು ಎಲ್ಲ ಬಗೆಯ ಗಡಿಗಳನ್ನು ದಾಟಿ, ಸತ್ಯದ ಗುರಿಯನ್ನು ಆನಂದದಿಂದ ಸೇರುವಂತೆ ಮಾಡುತ್ತದೆ. ಅಂಥವರಲ್ಲಿ ತ್ರಿವಿಕ್ರಮ ಪಂಡಿತರು, ನಾರಾಯಣ ಪಂಡಿತರು, ವಾಮನಪಂಡಿತರು, ವಾದಿರಾಜಯತಿಗಳು, ರಾಘವೇಂದ್ರಗುರುಗಳು ಹೀಗೆ ನೂರಾರು ಗುರುಗಳು ನಮ್ಮ ಕಣ್ಣ ಮುಂದೆ ಹಾದುಹೋಗುವರು. ಅಕಸ್ಮಾತ್ ಈ ಬಗೆಯ ವಿದ್ವತ್ತುಳ್ಳ ವ್ಯಕ್ತಿಯೊಬ್ಬ ಉತ್ತರ ಭಾರತದಲ್ಲಿ ಹುಟ್ಟಿದ್ದರೆ ಹೃದಯದಲ್ಲೇನು ತಲೆಯ ಮೇಲಿಟ್ಟುಕೊಂಡು ಕುಣಿಯುತ್ತಿದ್ದರು. ಆದರೆ ಸತ್ಯ ಕಹಿ, ಕಹಿಯನ್ನು ಇಷ್ಟಪಡುವವರು ಕಡಿಮೆ ಮತ್ತು ಸರಿಯಾದ ರೀತಿಯಲ್ಲಿ ತಿಳಿಹೇಳಲಿಲ್ಲ ಎನ್ನುವ ಕಾರಣಕ್ಕೋ ಏನೋ ಜನಮಾನಸದಲ್ಲಿ ಗಟ್ಟಿ ನಿಲ್ಲಲಿಲ್ಲ. ಆದರೂ ಕನ್ನಡಿಗರ ಭಾಗ್ಯ ದೊಡ್ಡದು. ಶ್ರೀಮಧ್ವಗುರುಗಳು ಹತ್ತಾರು ಉಪಾಸನೆಗಳ ಗೊಂದಲಕ್ಕೆ ಬಿದ್ದ ಸಜ್ಜನರ ಉದ್ಧರಿಸಲು ಉಡುಪಿಯ ಪಾಜಕಕ್ಷೇತ್ರದಲ್ಲಿ ಮಧ್ಯಗೇಹ ದಂಪತಿಗಳಲ್ಲಿ ವಾಸುದೇವನಾಗಿ ಜನಿಸಿದರು. ತುಳುನಾಡಿನ ಕ್ಷೇತ್ರ ದೇವತೆಯಾದ ಪರಶುರಾಮ ಸಾನ್ನಿಧ್ಯ ಮತ್ತು ಕೃಷ್ಣನ ತಂಗಿಯಾಗಿ ಕಾಣಿಸಿಕೊಂಡ ದುರ್ಗಾರೂಪ ಇಲ್ಲೆ ಅಕ್ಕಪಕ್ಕದಲ್ಲಿ ನೆಲೆಸಿವೆ. ಪರಶುರಾಮನಿಂದಲೆ ನಿರ್ಮಿತಿಗೊಂಡ ಬಾಣ, ಗದಾ, ಪರಶು ಮತ್ತು ಧನುಸ್ತೀರ್ಥಗಳು ಈ ಕ್ಷೇತ್ರಕ್ಕೆ ಮೆರುಗು ನೀಡಿವೆ. ಇರುವಷ್ಟು ಕಾಲವೂ ಆಚಾರ್ಯರು ಶಾಸ್ತ್ರಕ್ಕಾಗಿ ತನ್ನನ್ನು ಮೀಸಲಿರಿಸಿ ಅರ್ಥಪೂರ್ಣವಾದ ಬದುಕು ನಡೆಸಿದರು. ರಾಷ್ಟ್ರಾದ್ಯಂತ ಮೂರುಬಾರಿ ಸಂಚರಿಸಿ ಅರಿವಿನ ಬೀಜ ಬಿತ್ತಿದರು. ಈಗಲೂ ತನ್ನ ನೋಡಬಯಸುವವರಿಗೆ ತನ್ನ ಪ್ರತಿಕೃತಿಯಂತಿರುವ ಸರ್ವಮೂಲಗಳೆಂಬ ನೂರಾರು ಕೃತಿಗಳನ್ನು ನೀಡಿ ಅನುಗ್ರಹಿಸಿರುವರು. ನಾರಾಯಣ ಪಂಡಿತರು ಮಧ್ವವಿಜಯದ ಮೂಲಕ ಆಚಾರ್ಯರ ಜೀವನವನ್ನು ಪರಿಚಯಿಸಿ ನಮ್ಮನ್ನು ಋಣಿಗಳನ್ನಾಗಿಸಿದ್ದಾರೆ. ವಾದಿರಾಜಗುರುಗಳ ತೀರ್ಥಪ್ರಬಂಧ ಪಾಜಕದ ಮೇಲೆ ಬೆಳಕು ಚೆಲ್ಲಿದೆ. ಇನ್ನೂ ಅನೇಕ ಮಹನೀಯರು ಗುರುಗಳ ಮಹಿಮೆಯನ್ನು ಮನದುಂಬಿ ನೆನೆದಿದ್ದಾರೆ. ಈಗಲೂ ಪಾಜಕಕ್ಕೆ ಬಂದು, ತೀರ್ಥಗಳಲ್ಲಿ ಮಿಂದು ದೇವಸನ್ನಿಧಾನಗಳಲ್ಲಿ ಸೇವೆ ಸಲ್ಲಿಸಿದವರ ಎಲ್ಲ ಲೌಕಿಕ ಪಾರತ್ರಿಕ ಬಯಕೆಗಳು ಈಡೇರುತ್ತವೆ. ಯಾವುದೇ ತೊಡಕು ಗೊಂದಲಗಳಿದ್ದರು ಈ ಪಾಜಕದ ಮಧ್ವಗುರುಗಳ ಸನ್ನಿಧಿಯಲ್ಲಿ ಪರಿಹರಿಸುವಂತೆ ಕೋರಿದರೆ ಬದುಕು ನಿರಾಳಗೊಳ್ಳುತ್ತದೆ. ಪ್ರಾಕೃತಿಕ ಸೊಬಗು ಮೈಮರೆಸಿ ಮನವನ್ನು ಪುನಶ್ಚೇತನಗೊಳಿಸುತ್ತದೆ. -ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
ಕನ್ನಡನಾಡಿನ ಆಚಾರ್ಯರಾಗಿ ಸಿಕ್ಕಿದ ಶ್ರೀಮಧ್ವಗುರುಗಳು ಕೇವಲ ಮಾಧ್ವರ ಸೊತ್ತಲ್ಲ.. ಸಹೃದಯತೆಯಿಂದ ಸತ್ಯ ಒಪ್ಪಿಕೊಳ್ಳುವ ಎಲ್ಲ ವರ್ಗದವರ ಮಾರ್ಗದರ್ಶಕರು. ನಡೆಯಿಂದ ನುಡಿಯಿಂದ ಒಂದೆ ತೆರನಾಗಿ ಬದುಕಿದ ಅವರು ವಿಶ್ವದ ಸೋಜಿಗಗಳಲ್ಲಿ ಒಬ್ಬರು. ಹೊಸದಾದ ಯಾವ ವಾದವನ್ನೂ ಹುಟ್ಟು ಹಾಕದೆ ವ್ಯಾಸರ ವೇದಗಳ ಹೃದಯದಲ್ಲೇನಿದೆಯೋ ಅದನ್ನೆ ನಿರ್ಬಿಡೆಯಿಂದ ಎತ್ತಿತೋರಿದರು. ಸಾಮಾನ್ಯವಾಗಿ ಯಾವ ದೊಡ್ಡವರನ್ನೂ ಅವರ ಅನುಯಾಯಿಗಳು ಸರಿಯಾಗಿ ತಿಳಿಯದೆ ಇತರರ ಕೂಡೆ ತಮ್ಮ ಹಿರಿತನವನ್ನು ಹೆಮ್ಮೆಯನ್ನು ಅಭಿಮಾನದಿಂದ ಕಾಣುತ್ತಾರೆ; ಸಮರ್ಥಿಸುತ್ತಾರೆ. ಆಚಾರ್ಯರನ್ನು ತಾಳ್ಮೆಯಿಂದ ಅವರ ಗ್ರಂಥಗಳಿಂದ ಪರಿಚಯಿಸಿಕೊಂಡವರು ಜಗದ ಎಲ್ಲ ವೈವಿಧ್ಯವನ್ನು ಪ್ರೀತಿಸುವವರಾಗುವರು. ಅವರು ಭಾಷೆಯನ್ನು ದುಡಿಸಿಕೊಳ್ಳುವ ಸೊಗಡು, ಪ್ರಮೇಯಗಳ ನಿರೂಪಣೆಯ ಶೈಲಿ, ಅಸಾಧಾರಣವಾದ ಪ್ರತಿಭೆ, ವೇದ-ಪುರಾಣ-ಇತಿಹಾಸಗಳನ್ನು ಅರ್ಥೈಸುವ ರೀತಿ, ಪ್ರಾಪಂಚಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ, ವಿಷಯಗಳ ನಿಷ್ಕೃಷ್ಟ ವಿವರಣೆ ಸಾಧಕನನ್ನು ಎಲ್ಲ ಬಗೆಯ ಗಡಿಗಳನ್ನು ದಾಟಿ, ಸತ್ಯದ ಗುರಿಯನ್ನು ಆನಂದದಿಂದ ಸೇರುವಂತೆ ಮಾಡುತ್ತದೆ. ಅಂಥವರಲ್ಲಿ ತ್ರಿವಿಕ್ರಮ ಪಂಡಿತರು, ನಾರಾಯಣ ಪಂಡಿತರು, ವಾಮನಪಂಡಿತರು, ವಾದಿರಾಜಯತಿಗಳು, ರಾಘವೇಂದ್ರಗುರುಗಳು ಹೀಗೆ ನೂರಾರು ಗುರುಗಳು ನಮ್ಮ ಕಣ್ಣ ಮುಂದೆ ಹಾದುಹೋಗುವರು. ಅಕಸ್ಮಾತ್ ಈ ಬಗೆಯ ವಿದ್ವತ್ತುಳ್ಳ ವ್ಯಕ್ತಿಯೊಬ್ಬ ಉತ್ತರ ಭಾರತದಲ್ಲಿ ಹುಟ್ಟಿದ್ದರೆ ಹೃದಯದಲ್ಲೇನು ತಲೆಯ ಮೇಲಿಟ್ಟುಕೊಂಡು ಕುಣಿಯುತ್ತಿದ್ದರು. ಆದರೆ ಸತ್ಯ ಕಹಿ, ಕಹಿಯನ್ನು ಇಷ್ಟಪಡುವವರು ಕಡಿಮೆ ಮತ್ತು ಸರಿಯಾದ ರೀತಿಯಲ್ಲಿ ತಿಳಿಹೇಳಲಿಲ್ಲ ಎನ್ನುವ ಕಾರಣಕ್ಕೋ ಏನೋ ಜನಮಾನಸದಲ್ಲಿ ಗಟ್ಟಿ ನಿಲ್ಲಲಿಲ್ಲ. ಆದರೂ ಕನ್ನಡಿಗರ ಭಾಗ್ಯ ದೊಡ್ಡದು. ಶ್ರೀಮಧ್ವಗುರುಗಳು ಹತ್ತಾರು ಉಪಾಸನೆಗಳ ಗೊಂದಲಕ್ಕೆ ಬಿದ್ದ ಸಜ್ಜನರ ಉದ್ಧರಿಸಲು ಉಡುಪಿಯ ಪಾಜಕಕ್ಷೇತ್ರದಲ್ಲಿ ಮಧ್ಯಗೇಹ ದಂಪತಿಗಳಲ್ಲಿ ವಾಸುದೇವನಾಗಿ ಜನಿಸಿದರು. ತುಳುನಾಡಿನ ಕ್ಷೇತ್ರ ದೇವತೆಯಾದ ಪರಶುರಾಮ ಸಾನ್ನಿಧ್ಯ ಮತ್ತು ಕೃಷ್ಣನ ತಂಗಿಯಾಗಿ ಕಾಣಿಸಿಕೊಂಡ ದುರ್ಗಾರೂಪ ಇಲ್ಲೆ ಅಕ್ಕಪಕ್ಕದಲ್ಲಿ ನೆಲೆಸಿವೆ. ಪರಶುರಾಮನಿಂದಲೆ ನಿರ್ಮಿತಿಗೊಂಡ ಬಾಣ, ಗದಾ, ಪರಶು ಮತ್ತು ಧನುಸ್ತೀರ್ಥಗಳು ಈ ಕ್ಷೇತ್ರಕ್ಕೆ ಮೆರುಗು ನೀಡಿವೆ. ಇರುವಷ್ಟು ಕಾಲವೂ ಆಚಾರ್ಯರು ಶಾಸ್ತ್ರಕ್ಕಾಗಿ ತನ್ನನ್ನು ಮೀಸಲಿರಿಸಿ ಅರ್ಥಪೂರ್ಣವಾದ ಬದುಕು ನಡೆಸಿದರು. ರಾಷ್ಟ್ರಾದ್ಯಂತ ಮೂರುಬಾರಿ ಸಂಚರಿಸಿ ಅರಿವಿನ ಬೀಜ ಬಿತ್ತಿದರು. ಈಗಲೂ ತನ್ನ ನೋಡಬಯಸುವವರಿಗೆ ತನ್ನ ಪ್ರತಿಕೃತಿಯಂತಿರುವ ಸರ್ವಮೂಲಗಳೆಂಬ ನೂರಾರು ಕೃತಿಗಳನ್ನು ನೀಡಿ ಅನುಗ್ರಹಿಸಿರುವರು.
ನಾರಾಯಣ ಪಂಡಿತರು ಮಧ್ವವಿಜಯದ ಮೂಲಕ ಆಚಾರ್ಯರ ಜೀವನವನ್ನು ಪರಿಚಯಿಸಿ ನಮ್ಮನ್ನು ಋಣಿಗಳನ್ನಾಗಿಸಿದ್ದಾರೆ. ವಾದಿರಾಜಗುರುಗಳ ತೀರ್ಥಪ್ರಬಂಧ ಪಾಜಕದ ಮೇಲೆ ಬೆಳಕು ಚೆಲ್ಲಿದೆ. ಇನ್ನೂ ಅನೇಕ ಮಹನೀಯರು ಗುರುಗಳ ಮಹಿಮೆಯನ್ನು ಮನದುಂಬಿ ನೆನೆದಿದ್ದಾರೆ.
ಈಗಲೂ ಪಾಜಕಕ್ಕೆ ಬಂದು, ತೀರ್ಥಗಳಲ್ಲಿ ಮಿಂದು ದೇವಸನ್ನಿಧಾನಗಳಲ್ಲಿ ಸೇವೆ ಸಲ್ಲಿಸಿದವರ ಎಲ್ಲ ಲೌಕಿಕ ಪಾರತ್ರಿಕ ಬಯಕೆಗಳು ಈಡೇರುತ್ತವೆ. ಯಾವುದೇ ತೊಡಕು ಗೊಂದಲಗಳಿದ್ದರು ಈ ಪಾಜಕದ ಮಧ್ವಗುರುಗಳ ಸನ್ನಿಧಿಯಲ್ಲಿ ಪರಿಹರಿಸುವಂತೆ ಕೋರಿದರೆ ಬದುಕು ನಿರಾಳಗೊಳ್ಳುತ್ತದೆ. ಪ್ರಾಕೃತಿಕ ಸೊಬಗು ಮೈಮರೆಸಿ ಮನವನ್ನು ಪುನಶ್ಚೇತನಗೊಳಿಸುತ್ತದೆ.
-ವಿದ್ವಾನ್ ಕೃಷ್ಣರಾಜ ಕುತ್ಪಾಡಿ
ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
Amazing pravachana ,Pajaka kshetra,namo namah
Achare neevu naana favourite . Clear and crisp speech . Dhanyavadhagalu .. 🙏🙏🙏
JnanaGamya haagu Vid Krishnaraja Kuthpadi Acharyarige hrithpoorvaka ananthanatha namaskaara. Chinthanege bahala sulabhavaagi siguvanthaha Upanyasa. Dhanyosmi.
🙏
ಶ್ರೀ ಗುರೂಭ್ಯೋ ನಮಃ
ಗುರುಗಳೇ.ಧನ್ಯವಾದಗಳು
Wonderfull thought of Acharya namo to Sri Madhava charaya we proud kannadigas because Acharya birthday in pajaka
Dhanyosmi
💐🙏👌👌😊
🙏🙏ಧನ್ಯೋಸ್ಮಿ
🙏🙏🙏
Madhavacharya antarayame narayana nege namaskar
🙇♀️🙇♀️🙇♀️🙇♀️🙇♀️💐✌👍
🙏👌😊
Dhanyavaadagalu acharyare
🙏🏻☘️
🙏🙏🙏