ಶರಣು ಬೆನಕನೆ ಕನಕರೂಪನೆ | Sharanu benakane with kannada lyrics | Purandara Dasaru

แชร์
ฝัง
  • เผยแพร่เมื่อ 5 ก.ย. 2024
  • #bhajane #dasarapadagalu #PurandaraDasaru
    ಶರಣು ಬೆನಕನೆ ಕನಕರೂಪನೆ ಕಾಮಿನೀಸಂಗ ದೂರನೆ
    ಶರಣು ಸಾಂಬನ ಪ್ರೀತಿಪುತ್ರನೆ ಶರಣು ಜನರಿಗೆ ಮಿತ್ರನೆ||
    ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
    ಏಕವಿಂಶತಿ ಪತ್ರಪೂಜಿತಾನೇಕ ವಿಘ್ನ ವಿನಾಯಕ||
    ಲಂಬಕರ್ಣನೆ ನಾಸಿಕಧರನೆ ಗಾಂಭೀರ್ಯಯುತ ಗುಣಸಾರನೇ
    ಕಂಬುಕಂಧರ ಇಂದುಮೌಳಿಜ ಚಂದನ ಚರ್ಚಿತಾಂಗನೇ||
    ಚತುರ್ಬಾಹು ಚರಣತೊಡವಿನ-ಚತುರ ಆಯುಧ ಧಾರನೇ
    ಮತಿಯವಂತನೆ ಮಲಿನ ಜನಿತನೆ ಅತಿಯ ಮಧುರಾಹಾರನೇ||
    ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
    ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಧಾರನೇ||
    ಮೂಷಿಕಾಸನ ಶೇಷಭೂಷಣಾಶೇಷ ವಿಘ್ನವಿನಾಯಕ
    ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ||

ความคิดเห็น • 2