ಮರುಳು ಮಾಡಿ ಕೊಂಡೆಯಲ್ಲೇ | Marulu madi kondeyalle | Utsahi Bolma

แชร์
ฝัง
  • เผยแพร่เมื่อ 5 ก.ย. 2024
  • ಮರುಳು ಮಾಡಿಕೊಂಡೆಯಲ್ಲೆ
    ಮಾಯದೇವಿಯೆ||ಮರುಳು||
    ಇರುಳು ಹಗಲು ಏಕವಾಗಿ
    ಹರಿಯು ನಿನ್ನ ಬಿಡದಿಪಂತೆ
    ||ಮರುಳು||
    ಜ್ಞಾನಿಗಳು ನಿತ್ಯ ಅನ್ನ ಪಾನಾದಿಗಳನ್ನು ಬಿಟ್ಟು||2||
    ನಾನ ವಿಧದ ತಪದಲ್ಲಿದ್ದರು,
    ಧ್ಯಾನಕೆ ಸಿಲುಕಾದವನ||ನಾನಾ||
    ||ಮರುಳು||
    ರಂಗನು ಭೂಲೋಕದಿ
    ಭುಜಂಗ ಗಿರಿಯೊಳು ಅಲಮೇಲು||ರಂಗನು||
    ಮಂಗಪತಿಯಾಗಿ ನಿನ್ನ ಅಂಗೀಕರಿಸುವಂತೆ||2||
    ||ಮರುಳು||
    ಪ್ರಳಯಕಾಲದಲ್ಲಿ ಆಲದೆಲೆಯ
    ಮೇಲೆ ಮಲಗಿದ್ದಾಗ||ಪ್ರಳಯ||
    ಹಲವು ಆಭರಣಗಳು ಜಲವು
    ಆಗಿ ಜಾಣತನದಿ||ಹಲವು||
    ||ಮರುಳು||
    ಸರ್ವಸಂಗಬಿಟ್ಟು ಸನ್ಯಾಸಿಯಾದ ಕಾಲಕ್ಕು||2||
    ಸರ್ವದ ತನ್ನೆದೆಯ ಮೇಲೆ
    ಬಿಡದೆ ನಿನ್ನ ಧರಿಸಿಪಂತೆ||ಸರ್ವದ||
    ||ಮರುಳು||
    ಎಡಕೆ ಭೂಮಿ ಬಲಕೆ ಸಿರಿಯು
    ಎದುರಿನಲ್ಲಿ ದುರ್ಗಾದೇವಿ||ಎಡಕೆ||
    ತೊಡೆಯಮೇಲೆ ಲಕುಮಿಯಾಗಿ
    ಬಿಡದೆ ಮುದ್ದಾಟಿಪಂತೆ||ತೊಡೆಯ||
    ||ಮರುಳು||
    ಮಕ್ಕಳ ಪಡೆದರೆ ನಿನ್ನ
    ಚೊಕ್ಕ ತನವ ಪೋಗುದೆಂದು||ಮಕ್ಕಳ||
    ಹೊಕ್ಕುಳೊಲು ಮಕ್ಕಳ ಪಡೆದು
    ಕಕ್ಕುಲಾತಿ ಪಡೆವಂತೆ||ಹೊಕ್ಕು||
    ||ಮರುಳು||
    ಎಂದೆಂದಿಗು ಮರೆಯೆ ನಿನ್ನ
    ಆನಂದದಿ ಜನರಿಗೆಲ್ಲ||ಎಂದೆಂದಿಗು||
    ತಂದು ತೋರೆ ಸ್ವಾಧೀನ
    ಪುರಂದರವಿಠ್ಠಲರಾಯನ||ತಂದು||
    ||ಮರುಳು||

ความคิดเห็น • 48