ಕೃಷಿ ಕೆಲಸಗಳನ್ನು ಸುಲಭಗೊಳಿಸುವ E ವಾಹನ

แชร์
ฝัง
  • เผยแพร่เมื่อ 6 ก.ย. 2024
  • ಕಳೆದ ನಾಲ್ಕು ತಿಂಗಳುಗಳಿಂದ ನಮ್ಮ ಕೃಷಿ ಕಾರ್ಯಗಳನ್ನು ಸುಲಭ ಗೊಳಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಿರುವ ಈ ನಮ್ಮ ವಾಹನ e kart . ಕನಿಷ್ಠ 6ರಿಂದ 7 ಜನರು ತಲೆಹೊರೆಯಲ್ಲಿ ಕೊಂಡೊಯ್ಯುವ ಭಾರದ ವಸ್ತುಗಳನ್ನು ಈ ವಾಹನ ಹೇರಿಕೊಂಡು ಹೋಗುತ್ತದೆ. ಅಡಿಕೆ ತೋಟದ ಸಾಲುಗಳ ಮಧ್ಯೆ ಬಹಳ ಸಲೀಸಾಗಿ ಸಾಗುವ ಈ ವಾಹನ ಸಂಪೂರ್ಣ ಬ್ಯಾಟರಿ ಚಾಲಿತ. ಯಾವುದೇ ಶಬ್ದ ಮಾಲಿನ್ಯ ವಿಲ್ಲ, ಪರಿಸರ ಮಾಲಿನ್ಯ ವಿಲ್ಲ. ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್ ಆದರೆ ಕನಿಷ್ಠ 60 ಕಿಲೋಮೀಟರ್ ಗಳ ದೂರವನ್ನು ಕ್ರಮಿಸುವ ಸಾಮರ್ಥ್ಯ ಈ ವಾಹನದಲ್ಲಿ ಇದೆ. ಅಲ್ಲದೆ ಐದರಿಂದ ಆರು ಕ್ವಿಂಟಾಲ್ ತನಕ ಬಾರವನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. ಮಳೆಗಾಲ ಬೇಸಿಗೆಗಾಲ ಎನ್ನದೆ ಯಾವುದೇ ಏರು-ತಗ್ಗು, ಕೆಸರಿನ-ಜಾರುವ ಪ್ರದೇಶದಲ್ಲೂ ಅನಾಯಾಸವಾಗಿ ಸಾಗಾಟ. ರಾತ್ರಿ ಸಮಯದಲ್ಲಿ ಸಾಗಲು ಹೆಡ್ಲೈಟ್ ನ ವ್ಯವಸ್ಥೆಯೂ ಇದೆ. ಪರಿಮಿತ ವೇಗದ ಮಿತಿಯನ್ನು ಹೊಂದಿದ್ದು ಸಂಪೂರ್ಣ ಸಮತೋಲಿತ ಚಾಲನೆಯನ್ನು ಮಕ್ಕಳು , ಮಹಿಳೆಯರು ಎನ್ನದೆ ಯಾರೊಬ್ಬರೂ ಸುಲಭದಲ್ಲಿ ಚಾಲನೆ ಮಾಡುವ ಈ ವಾಹನ , ಕೂಲಿಯಾಳುಗಳ ಸಮಸ್ಯೆಯ ಈ ಕಾಲದಲ್ಲಿ ಕೃಷಿಕರಿಗೊಂದು ಆಪದ್ಬಾಂಧವ . ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8553215557

ความคิดเห็น • 13