ದಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೇಮಾಮಯ || ಪ ||

แชร์
ฝัง
  • เผยแพร่เมื่อ 19 ม.ค. 2025
  • ದಯಾಮಯ ಗುರು ಕರುಣಾ ಮಯ
    ಕರುಣಾ ಮಯ ಗುರು ಪ್ರೇಮಾಮಯ || ಪ ||
    ಪರಮ ಸ್ವರೂಪನು ತಾನಂತೆ
    ಅರಿಯಲು ಭಕ್ತಿಯು ಬೇಕಂತೆ
    ಒಲಿದರೆ ಪಾವನನವನಂತೆ
    ಸಂಸಾರದ ಭಯ ಅವಗಿಲ್ಲಂತೆ || ೧ ||
    ಗುರುವಿಗೆ ಸಮನಾರಿಲ್ಲಂತೆ
    ಗುರು ಪಾದವ ನಂಬಿರಬೇಕಂತೆ
    ಧೃಢತೆಯು ತನಗಿರಬೇಕಂತೆ
    ಧೃತಿ ಗೆಡದೆ ತಾನಿರಬೇಕಂತೆ || ೨ ||
    ಪಾಪಿಗೆ ತಾ ಬಹು ದೂರಂತೆ
    ದುರ್ಮಾರ್ಗಿಗೆ ಕಾಣನು ಗುರುವಂತೆ
    ಕುಟಿಲರಿಗೆ ಒಲಿಯನು ತಾನಂತೆ
    ಕುಹಕಿಗೆ ಎಂದೂ ಸಿಗನಂತೆ || ೩ ||
    ಜ್ಞಾನವೇ ತನ್ನುಸಿರು ಆಗಿಹುದು
    ಉಸಿರಲು ಪಾವನವಾಗುವುದು
    ಸೇವೆಯೆ ಸಾಧನೆಯಾಗಿಹುದು
    ಗುರು ಕರುಣೆಯೆ ಧನ್ಯನ ಮಾಡುವುದು || ೪ ||
    ಶರಣಾಗತರನು ಕಾಯುವನು
    ಪರಾಮನಂದವ ನುಡಿಸುವನು
    ನಿಜಭಕ್ತಿಗೆ ಗುರು ತಲೆಬಾಗುವನು
    ಭವ ಜಲದಿಯ ದಾಂಟಿಸಿ ಕಾಯುವನು || ೫ ||
    ನಾನೀಯೆಂಬುದ ನಳಿಯೆಂದ
    ಮದ ಮತ್ಸರಗಳ ನೀ ಸುಡು ಎಂದ
    ದುರುಳರಿಗೆ ನಾ ದೂರೆಂದ
    ದುರಹಂಕಾರಿಗೆ ತಾ ಸಿಗನೆಂದ || ೬ ||
    ಸದ್ಗುರು ದೊರೆವುದು ದುರ್ಲಭವು
    ದೊರೆತರೆ ಜನ್ಮವು ಪಾವನವು
    ಸಾರುತಲರಿವವು ಶಾಸ್ತ್ರಗಳು
    ಗುರುಪರಮೇಶ್ವನು ಅಹುದೆಂದು || ೭ ||
    ಅಚ್ಯುತ ಅನಂತ ಶ್ರೀಗುರುವೇ
    ಚಿನ್ಮಯ ಚಿತ್ರಣ ನೀ ಗುರುವೇ
    ಗುರು ಕನ್ಯೇಶ್ವರ ಬಾ ಗುರುವೇ
    ಕರ ಜೋಡಿಸಿ ನಾ ಶಿರ ಬಾಗಿರುವೆ || ೮ ||

ความคิดเห็น • 2